
ಸಿರವಾರ,ಏ.೨೮- ದೀನ ದಲಿತರ ನಾಯಕ, ದಣಿವರಿಯದ ಹೋರಾಟಗಾರ,ರಾಜ್ಯ ಕಂಡ ಅಪರೂಪದ ರಾಜಕಾರಣಿ, ರೈತ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನರು ನಾಳೆ ಆಗಮಿಸಿ ಬಿಜೆಪಿ ಅಭ್ಯರ್ಥಿಯಾದ ಬಿ.ವಿ.ನಾಯಕರ ಪರ ಪ್ರಚಾರ, ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಬಿಜೆಪಿಯ ಮಾಜಿ ಜಿಲ್ಲಾದ್ಯಕ್ಷ ಜೆ.ಶರಣಪ್ಪಗೌಡ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಮದ್ಯಾಹ್ನ ೩ ಗಂಟೆ ಸುಮಾರಿಗೆ ರಾಯಚೂರು ರಸ್ತೆಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಬಸವೇಶ್ವರ ವೃತ್ತದಿಂದ ತೆರೆದ ವಾಹನದಲ್ಲಿ ಮುಖ್ಯರಸ್ತೆಯ ಮೂಲಕ ಬಸ್ ನಿಲ್ದಾಣದ ಹತ್ತಿರದ ಜೆ.ಶರಣಪ್ಪಗೌಡ ಜಾಗದಲ್ಲಿ ಹಮ್ಮಿಕೊಂಡಿರುವ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಬಿ.ವಿ.ನಾಯಕ ಅವರ ಪರ ಮಾತನಾಡಲಿದ್ದಾರೆ.
ಇವರ ಜೊತೆ ಹಿರಿಯ ನಟಿ, ಪಕ್ಷದ ಮಹಿಳಾ ಸ್ಟಾರ್ ಪ್ರಚಾರಕಿಯಾದ ಶೃತಿ ಯವರು ಸಹ ಆಗಮಿಸಲಿದ್ದಾರೆ.
ಈ ನಿಟ್ಟಿನಲ್ಲಿ ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಮತ್ತು ಮಹಾಶಕ್ತಿ ಕೇಂದ್ರಗಳ ಪ್ರಮುಖರು, ಬಿ.ವಿ.ನಾಯಕ ಅಭಿಮಾನಿಗಳು ಮತ್ತು ಬಿ.ಎಸ್.ವೈ ಅಭಿಮಾನಿಗಳು, ಮಾನ್ವಿ ವಿಧಾನ ಸಭಾ ಕ್ಷೇತ್ರದ ಸಿರವಾರ ಮತ್ತು ಮಾನ್ವಿ ತಾಲೂಕಿನ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ನಂತರ ಪ.ಪಂ ಸದಸ್ಯ ಕೃಷ್ಣ ನಾಯಕ ಮಾತನಾಡಿ ಬಿ.ವಿ.ನಾಯಕರ ಬಗ್ಗೆ ಕಾಂಗ್ರೆಸ್ ಪಕ್ಷದ ಶರಣಯ್ಯನಾಯಕ ಮಾತನಾಡಿರುವುದು ಅಕ್ಷಮ್ಯವಾಗಿದೆ. ನೀವು ಈ ಹಿಂದೆ ಇದೇ ಪಕ್ಷದಿಂದ ಸ್ಪರ್ದೇ ಮಾಡಿರುವುದು ಮರೆತಿದಿರೆನು, ಅದಿಕಾರಿದ ಆಸೆಗಾಗಿ ನೀವು ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರಿಲವೆನು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಯಾವ ಕ್ಷೇತ್ರದಲ್ಲಿಯಾದರೂ ಸ್ಪರ್ಧೆ ಮಾಡ ಹಕ್ಕು ಇದೇ ಎಂಬುದು ಮರೆತಿದ್ದಿರಿ, ಮತದಾರರು ಪ್ರಭುದ್ದರಾಗಿದ್ದಾರೆ. ಯಾರನ ಮನೆಗೆ ಕಳಿಸುತ್ತಾರೆಂಬುದು ಮೇ೧೩ ರಂದು ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿವಶರಣಗೌಡ ಲಕ್ಕಂದಿನ್ನಿ, ಜೆ.ದೇವರಾಜ, ಚನ್ನೂರು ಚನ್ನಪ್ಪ,ಶಿವಗ್ಯಾನಿ, ಮಲ್ಲಿಜಾರ್ಜುನ ಜೇಗರಕಲ್, ಉಮೇಶ ಜೇಗರಕಲ್, ಪ.ಪಂ ಸದಸ್ಯರಾದ ಅಜೀತ ಹೊನ್ನಟಗಿ, ಅಮರೇಶ ಗಡ್ಲ,ಸಂದೀಪ್ ಪಾಟೀಲ್,ಮಲ್ಲಪ್ಪ, ವಿನಾಯಕ, ರಾಮಯ್ಯ, ಮಹಾಶಕ್ತಿ ಕೇಂದ್ರದ ಅದ್ಯಕ್ಷ ಹೆಚ್.ಕೆ.ಅಮರೇಶ, ರಾಜಗೋಪಾಲ, ರಮೇಶ ಶೇಟ್ಡಿ, ವಸಂತನಾಯಕ, ಶುಭಾಷ ಚಾಗಭಾವಿ, ಡೆವಿಡ್, ಮಲ್ಲು ಸಿಕಂಟಿ ಸೇರಿದಂತೆ ಇನ್ನಿತರರು ಇದ್ದರು.