ನಾಳೆ ಮುಗಳನಾಗಾವಿ ಶ್ರೀಗಳಿಗೆ ಗುರುವಂದನೆ

ಕಲಬುರಗಿ,ಜ 24: ಮುಗಳನಾಗಾವಿಯ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರ 47ನೇ ಜನ್ಮದಿನದಂದು ಗುರು ವಂದನ ಸಮಾರಂಭ ಮತ್ತು ಮುಗುಳ್ನಗೆಯ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶ್ರೀ ಸಿದ್ರಾಮೇಶ್ವರ ಕಣ್ಣಿನ ಆಸ್ಪತ್ರೆ ಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಾಳೆ ( ಜ 25) ಮುಗುಳುನಾಗಾವಿಶ್ರೀ ಮಠದ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ3ರ ವರೆಗೆ ತಪಾಸಣಾ ಶಿಬಿರ ನಡೆಯಲಿದ್ದು, ಕೆಕೆಆರ್ ಡಿ ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಉದ್ಘಾಟಿಸುವರು. ತಜ್ಞ ವೈದ್ಯರಾದ ಡಾ. ವಿಶ್ವನಾಥ ರೆಡ್ಡಿ, ಡಾ ರಾಜಶ್ರೀ ರೆಡ್ಡಿ, ಡಾ ಶರಣಕುಮಾರ.ಡಾ.ಸಿದ್ದಲಿಂಗ ರೆಡ್ಡಿ,ಡಾನೀತಾಕುಮಾರಿ ತಪಾಸಣೆ ನಡೆಸುವರು.ಸಂಜೆ 6.30ಕ್ಕೆ ಗುರುವಂದನ, ಮುಗುಳ್ನಗೆಯ ಮಂದಾರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜೀ ಅÀರ ನೇತೃತ್ವದಲ್ಲಿ ಕಲಾ ಸಾಮ್ರಾಟ ಎಸ್.ನಾರಾಯಣ ಹಾಗೂ ಇಂಡಿಯನ್ ಐಡಲ್ ನ ಸ್ಪರ್ಧಿಯಾಗಿದ್ದ ಖ್ಯಾತ ಗಾಯಕಿ ಕುಮಾರಿ ಶಿವಾನಿ ಸ್ವಾಮಿ ಅವರಿಗೆಮುಗುಳ್ನಗೆಯ ಮಂದಾರ ಪ್ರಶಸ್ತಿ ಹಾಗೂ ತಲಾ 5 ಗ್ರಾಂ ಚಿನ್ನದುಂಗುರ ಮತ್ತು ಪ್ರಶಸ್ತಿ ಫಲಕ ಹಾಗೂ ಫಲ ಪುಷ್ಪಗಳೊಂದಿಗೆ ಗೌರವಿಸಿ ಆಶೀರ್ವದಿಸಲಾಗುವದು