
ಕಲಬುರಗಿ:ಆ.4: ಜಿಲ್ಲೆಯ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹರದ ತನಿಖೆಗೆ ಆಗ್ರಹಿಸಿ ನಾಳೆ ನಗರಕ್ಕೆ ಆಗಮಿಸುತ್ತಿರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುತ್ತಿಗೆ ಹಾಕಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಹೆಚ್. ಭಾಸಗಿ ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಕೀಟಗಳನ್ನು ತಮಗೆ ಬೇಕಾದ ಒಬ್ಬ ವ್ಯಕ್ತಿಗೆ ಸುಮಾರು 250 ಕೀಟಗಳನ್ನು ನೀಡಿರುತ್ತಾರೆ. ಇವುಗಳನ್ನು ವಿತರಿಸುವಾಗ ಆ ವ್ಯಕ್ತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳ ಕುರಿತಾದ ಯಾವುದೇ ರೀತಿಯ ದಾಖಲೆಗಳನ್ನು ಕೂಡಾ ಪಡೆದಿರುವದಿಲ್ಲ, ಈ ಇಲಾಖೆಯಿಂದ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗುವುದು.
ಕಾರ್ಮಿಕ ಮಕ್ಕಳ ಶಿಷ್ಯ ವೇತನ ಕೂಡ ಮಂಜೂರಿ ಮಾಡಿರುವುದರಿಲ್ಲ, ಅಲ್ಲದೆ ಕಟ್ಟಡ ಕಾರ್ಮಿಕರ ಇನ್ನಿತರ ಯೋಜನೆಗಳಾದ ಶಿಕ್ಷಣಕ್ಕೆ ಲ್ಯಾಪ್‍ಟಾಪ್ ವಿತರಿಸಿರುವದಿಲ್ಲ, ಲೇಬರ ಕಾರ್ಡ ಒಪ್ಪಿಗೆ ನೀಡಲು ಸತಾಯಿಸುತ್ತಾರೆ. ಕಟ್ಟಡ ಕಾರ್ಮಿಕ ಸಾಮಗ್ರಿಗಳ ಕಿಟ್ಟಗಳನ್ನು ಕೂಡ ನಿಜವಾದಸ ಕಾರ್ಮಿಕರಿಗೆ ತಲುಪುವದಿಲ್ಲ, ಅಂತ್ಯಕ್ರಿಯೆ ಧನ ಸಹಾಯ ಕೂಡ ನೀಡುತ್ತಿಲ್ಲ.