ನಾಳೆ ಮಾನ್ವಿ ಬಂದ್

ರೈತ ವಿರೋಧಿ ನೀತಿ- ಡಿ.ವೀರನಗೌಡ
ಮಾನ್ವಿ.ಮಾ.೨೫-ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯ ಸರ್ಕಾರದ ಭೂದಾಖಲೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಮಾ.೨೬ ರಂದು ಮಾನ್ವಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕ ಅಧ್ಯಕ್ಷ ಡಿ.ವೀರನಗೌಡ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ಶೇ.೭೪ ರಷ್ಟು ಜನರು ಕೃಷಿ ಹಾಗೂ ಕೃಷಿ ಕೂಲಿ ಮೇಲೆ ಅವಲಂಬಿತರಾಗಿದ್ದಾರೆ. ಒಕ್ಕಲುತನ ಆಧಾರದ ಮೇಲೆ ಜೀವನ ಸಾಗಿಸುತ್ತಿರುವ ರೈತರ ಪರ ಕಾಯ್ದೆಗಳನ್ನು ಜಾರಿಗೊಳಿಸದೆ ರೈತ ವಿರೋಧಿ ಹಾಗೂ ಕಾರ್ಪೋರೆಟ್‌ಗಳ ಪರವಾಗಿರುವುದು ತೀರಾ ಖಂಡನೀಯ ಎಂದರು.
ಕೇಂದ್ರ ಸರ್ಕಾರ ರೈತರಿಗೆ ಸೂಕ್ತ ಬೆಂಬಲ ಬೆಲೆ ಜೊತೆಗೆ ಕೃಷಿ ಮಾರಕ ಕಾಯ್ದೆಗಳನ್ನು ರದ್ದುಪಡಿಸಬೇಕು. ಮತ್ತು ಭೂದಾಖಲೆ ಇಲಾಖೆಯಲ್ಲಿನ ಆವ್ಯವಸ್ಥೆಯನ್ನು ಸರಿಪಡಿಸಲು ರಾಜ್ಯ ಸರ್ಕಾರ ಮುಂದಾಗುವ ಮೂಲಕ ರೈತರ ಹಿತ ಕಾಪಾಡಬೇಕೆಂದು ಡಿ.ವೀರನಗೌಡ ಆಗ್ರಹಿಸಿದರು.
ಮಾ.೨೬ ರಂದು ನಡೆಯುವ ಮಾನ್ವಿ ಬಂದ್‌ನಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳು, ರೈತಪರಸಂಘಟನೆಗಳು, ರೈತ ಮುಖಂಡರು
ಭಾಗವಹಿಸಬೇಕೆಂದು ಕರೆ ನೀಡಿದರು.