ನಾಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೀದರ್‍ಗೆ ಆಗಮನ

ಬೀದರ್:ಏ.24: ನಾಳೆ ಗುರುವಾರ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕೇಂದ್ರಿಯ ಬಿಜೆಪಿ ಪಾರ್ಲಿಮೆಂಟ್ರಿ ಬೋರ್ಡ್‍ನ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ಬೀದರ್ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಈ ಕುರಿತು ಪ್ರಕಟಣೆ ಜಂಟಿ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಥ ಪಾಟೀಲ ಹುಡಗಿ, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಅವರು, ಈ ತಿಂಗಳ 25ರಂದು ಯಡಿಯೂರಪ್ಪ ಅವರು, ಬೆಳಿಗ್ಗೆ 9.05 ಗಂಟೆ ಸುಮಾರಿಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ 10.30ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 10.35 ಗಂಟೆಗೆ ಬೀದರ್ನಿಂದ ರಸ್ತೆ ಮಾರ್ಗವಾಗಿ 11.20 ಗಂಟೆಗೆ ಔರಾದ್ ತಲುಪಿ ಅಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡುವರು. 11.30ಕ್ಕೆ ಅಲ್ಲಿಂದ ನಿರ್ಗಮಿಸಿ 1.10ಕ್ಕೆ ಬೀದರ್‍ನ ಪ್ರತಿಷ್ಟಿತ ವೈಬ್ ಹೋಟಲಗೆ ಆಗಮಿಸುವರು. 330 ಗಂಟೆಗೆ ವೀರಶೈವ ಲೀಂಗಾಯತ ಮಠಾಧೀಶರು ಹಾಗೂ ನಾಯಕರೊಂದಿಗೆ ಸಭೆ ನಡೆಸುವರು. 4.00 ಗಂಟೆಗೆ ವೈಬ್ ಹೋಟಲ್‍ನಿಂದ ನಿರ್ಗಮಿಸಿ ಎಸ್.ಆರ್.ಎಸ್ ಫಂಕ್ಷನ್ ಹಾಲ್‍ಗೆ ಬಂದು ಅಲ್ಲಿ ಮರಾಠಾ ಸಮುದಾಯದೊಂದಿಗೆ ವಿಶೇಷ ಸಭೆ ನಡೆಸುವರು. 4.35 ಗಂಟೆಗೆ ಅಲ್ಲಿಂದ ನಿರ್ಗಮಿಸಿ ಬೀದರ್ ದಕ್ಷಿಣ ಕ್ಷೇತ್ರದ ಹೆಬ್ಬಾಗಿಲು ಮನ್ನಾಯಿಖೆಳ್ಳಿಗೆ ತೆರಳಿ ಅಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುವರು. 6.35ಕ್ಕೆ ಅಲ್ಲಿಂದ ನಿರ್ಗಮಿಸಿ 7.10 ಗಂಟೆಗೆ ಬೀದರ್ ಏರ್‍ಪೋರ್ಟ್‍ಗೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ,
ಆದ ಕಾರಣ ಜಿಲ್ಲೆಯ ಎಲ್ಲ ಬಿಜೆಪಿ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಔರಾದ್ ಹಾಗೂ ಮನ್ನಾಯಿಖೆಳ್ಳಿ ಕಾರ್ಯಕ್ರಮಗಳುಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಂದು ಅಲ್ಲದೇ ಬೀದರ್ ನಗರದಲ್ಲಿ ಜರುಗಲಿರುವ ವೀರಶೈವ ಲಿಂಗಾಯತ ಮತ್ತು ಮರಾಠಾ ಸಮಾಜದ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.