ನಾಳೆ ಮಹಿಳಾ ಸಮಾವೇಶ

ಹುಮನಾಬಾದ್: ಮಾ.4:ಅಭಿಷೇಕ್ ಪಾಟೀಲ ಅವರ 34ನೇ ಹುಟ್ಟು ಹಬ್ಬ ಹಾಗೂ ದಿನಾಚಾರಣೆ ಅಂಗವಾಗಿ ಪಟ್ಟಣದ ರಾಜರಾಜೇಶ್ವರಿ ದೇವಸ್ಥಾನ ಆವರಣದಲ್ಲಿ ಕಾಂಗ್ರೆಸ್ ಯುವ ಘಟಕ ಮತ್ತು ಅಭಿಷೇಕ್ ಪಾಟೀಲ ಅಭಿಮಾನಿ ಬಳಗದಿಂದ ಮಾತೃ ನಮನ ಕಾರ್ಯಕ್ರಮ ಆಯೋಜಿಸಿಲಾಗಿದೆ, ಎಂದು ಮಾಜಿ ಸಚಿವರು, ಹಾಲಿ ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಭಿಷೇಕ್ ಪಾಟೀಲ ಅವರ 34ನೇ ಹುಟ್ಟು ಹಬ್ಬ ಹಾಗೂ ಮಹಿಳಾ ದಿನಾಚಾರಣೆ ಪ್ರಯುಕ್ತ ಅಂದು ಸಾಯಂಕಾಲ 5 ಗಂಟೆಗೆ ನಡೆಯುವ ಮಹಿಳಾ ಸಮಾವೇಶಕ್ಕೆ ಸುಮಾರು 15 ಸಾವಿರ ಮಹಿಳೆಯರು ಸೇರುವ ನೀರಿಕ್ಷೆ ಇದೆ. ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ, ಮಾಜಿ ಸಚಿವೆ, ಖ್ಯಾತ ನಟಿ ಉಮಾಶ್ರೀ, ಜೊತೆ, ಜೊತೆಯಲ್ಲಿ ಧಾರವಾಹಿ, ಹಾಗೂ ಕನ್ನಡ ಚಲನಚಿತ್ರ ನಟಿ ಮೇಘಾ ಶೆಟ್ಟಿ, ಹಾಸ್ಯ ಕಲಾವಿದೆ ಸುಧಾ ಬರಗೂರಿ, ಕನ್ನಡ ಖ್ಯಾತ ಹಿನ್ನಲೆ ಗಾಯಕಿ ಡಾ.ಶಮಿತಾ ಮಲ್ನಾಡ,
ಗಾಯಕಿ ಸುಹಾನಾ ಸಯ್ಯದ್, ಐಶ್ವರ್ಯ ನಿರೂಪಕಿ, ಪ್ರಧ್ಯಾಪಕಿ ಡಾ.ಅರುಂಧತಿ ಪಾಟೀಲ, ಗಾಯಕರಾದ ಚನ್ನಪ್ಪ, ಸುನೀಲ, ಆಗಮಿಸಲಿದ್ದಾರೆ. ಎಂದರು.

ಅಭಿಷೇಕ್ ಪಾಟೀಲ ಅವರ 34ನೇ ಹುಟ್ಟು ಹಬದ ಪ್ರಯುಕ್ತ ಮಾರ್ಚ ದಿ.ಬಸವರಾಜ ಪಾಟೀಲ ಫೌ0ಡೇಷನ್ ಹಾಗೂ ಎನ್‍ಜಿಎನ್ ಫೌಂಡೇಷನ್, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ರಾಜರಾಜೇಶ್ವರಿ ಆಯುರ್ವೇದ್ ಕಾಲೇಜು, ಶಕುಂತಲಾ ಪಾಟೀಲ ಶಾಲೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ಮಾರ್ಚ 5 ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 2 ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಎಂದು ಮಾಹಿತಿ ನೀಡಿದರು.

ಎಂದ ಅವರು ರಾಜೇಶ್ವರ ಗ್ರಾಮದಲ್ಲಿ ನಿರ್ಮಾಣಗೊಂಡ ನೂತನ್ ಬಸ್ ನಿಲ್ದಾಣವನ್ನು ಮಾರ್ಚ 5ರಂದು ಲೋಕಾರ್ಪಣೆಗೊಳಿಸಲಾಗುತ್ತಿದೆ, ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ, ಭೀಮರಾವ್ ಪಾಟೀಲ, ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಅಭಿಷೇಕ ಆರ್ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪರಮಿಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಮಗಿ, ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಪ್ರಮುಖರಾದ ದತ್ತಕುಮಾರ ಚಿದ್ರ, ಕಂಟೆಪ್ಪ ದಾನಾ, ಇದ್ದರು.