ನಾಳೆ ಮಹಾತಾಯಿ’ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ-ನೃತ್ಯೋತ್ಸವ ಮತ್ತು ಮಹಿಳಾ ಕವಿಗೋಷ್ಠಿ

ಬೀದರ:ಮಾ.18:ಮಾ.19 ರಂದು ಬೆಳಿಗ್ಗೆ 10:00 ಗಂಟೆಗೆ, ಸ್ಥಳ: ಮಹಾಲಕ್ಷ್ಮಿ ಸಭಾಂಗಣ, ಕೃಷ್ಣಾದರ್ಶಿನಿ ಹೋಟೆಲ್, ಚನ್ನಮ್ಮ ವೃತ್ತ ಮೈಲೂರ್ ಕ್ರಾಸ್, ಬೀದರ ಇಲ್ಲಿ ‘ಮಹಾತಾಯಿ’ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ-ನೃತ್ಯೋತ್ಸವ ಮತ್ತು ಮಹಿಳಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಉದ್ಘಾಟಕರಾಗಿ ಶ್ರೀ ರಾಜೇಂದ್ರಕುಮಾರ ಗಂದಗೆ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು ಹಾಗೂ ಜಿಲ್ಲಾಧ್ಯಕ್ಷರು, ಬೀದರ, ಅಧ್ಯಕ್ಷತೆಯನ್ನು ಶ್ರೀಮತಿ ಸಂಗೀತಾ ರಾಜಕುಮಾರ ವಾಲ್ದೊಡ್ಡಿ, ಖಜಾಂಚಿ, ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕøತಿಕ ಟ್ರಸ್ಟ್, ಬೀದರ, ಮಹಾತಾಯಿ ಪ್ರಶಸ್ತಿಗೆ ಶ್ರೀಮತಿ ಮಹಾದೇವಿ ಶಾಂತಪ್ಪಾ ದೇವರಾಯ ಭಾಜನರಾಗಿರುತ್ತಾರೆ. ಅಲ್ಲದೇ ಶ್ರೀ ಕೆ. ಗುರುಮೂರ್ತಿ, ಮಾಲೀಕರು ಶ್ರೀ ಸಿದ್ಧಿ ವಿನಾಯಕ ದರ್ಶಿನಿ ಉಡುಪಿ ಹೋಟೆಲ್, ಬೀದರ ಇವರು ಕಾಯಕ ನಿಷ್ಠೆ ವಿಶೇಷ ಸನ್ಮಾನಕ್ಕೆ ಭಾಜನರಾಗಿರುತ್ತಾರೆ.

ಮುಖ್ಯ ಅತಿಥಿಗಳಾಗಿ, ಶ್ರೀ ದತ್ತಪ್ಪಾ ಸಾಗರನೂರ, ಸಹಾಯಕ ನಿರ್ದೆಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೀದರ, ಶ್ರೀಮತಿ ಗೀತಾ ಎಸ್. ಗಡ್ಡಿ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಯೋಜನೆ ತಾಲ್ಲೂಕಾ ಪಂಚಾಯತ, ಬೀದರ, ಡಾ|| ಸಂಜೀವಕುಮಾರ ಅತಿವಾಳೆ, ಸಂಚಾಲಕರು, ಅತಿವಾಳೆ ಸಾಂಸ್ಕøತಿಕ ಪ್ರತಿಷ್ಠಾನ, ಬೀದರ, ಡಾ|| ಸುನೀತಾ ಕುಡ್ಲಿಕರ್, ಉಪನ್ಯಾಸಕರು, ಕರ್ನಾಟಕ ಪದವಿ ಕಾಲೇಜು, ಬೀದರ ಇವರು ಆಗಮಿಸುತ್ತಿದ್ದಾರೆ.

ಶ್ರೀ ರಮೇಶ ಕೊಳಾರ, ಶ್ರೀ ದಿಲೀಪ ಕಾಡವಾದ, ಶ್ರೀ ಶಿವಕುಮಾರ ಪಾಂಚಾಳ, ಕು. ಸುಶ್ಮೀತಾ, ಶ್ರೀಮತಿ ಸುರೇಖಾ ಕುಲಕರ್ಣಿ, ಕು. ವರ್ಷಾ, ಕು. ಪ್ರಿಯಾ, ರಮಾಬಾಯಿ ಮಹಿಳಾ ಮಂಡಳ, ಕು. ಸೃಷ್ಠಿರೆಡ್ಡಿ, ಶ್ರೀಮತಿ ರಾಣಿ ಸತ್ಯಮೂರ್ತಿ, ಕು. ಭವಾನಿ ವಗ್ಗೆ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ಇವರುಗಳು ಸಂಗೀತ, ನೃತ್ಯ ಮತ್ತು ಕವಿಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ.

ಕಾವ್ಯನಂದಿನಿ ಶಿಂಧೆ, ಸುಪ್ರೀತಾ ಶೀಲವಂತ, ಕುಸುಮಾ ಹತ್ಯಾಳ, ಧನಲಕ್ಷ್ಮೀ ಪಾಟೀಲ, ಸ್ವರೂಪರಾಣಿ ಪಾಟೀಲ, ಡಾ. ಸುಜಾತಾ ಹೊಸಮನಿ, ಸಾಧನಾ ರಂಜೋಳಕರ್, ಕನ್ಯಾಕುಮಾರಿ ಮೂಲಗೆ, ಚನ್ನಮ್ಮಾ ವಲ್ಲೆಪೂರೆ, ಸುನೀತಾ ಬಿರಾದಾರ, ಪೂಜಾ ಪಟ್ನೆ, ಪ್ರಿಯಾಂಕ ಹೆಚ್.ಬಿ. ಜಗದೇವಿ ದುಬಲಗುಂಡೆ, ಪುಷ್ಪಾ ಜಿ. ಕನಕ, ಪ್ರಿಯಾ ಲಂಜವಾಡಕರ್, ಸರೀತಾ ಹುಡಗಿಕರ್, ಮಾಧುರಿ ಎಸ್.ಕೆ. ವಿಜಯಲಕ್ಷ್ಮೀ ಗೌತಮಕರ ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಂಭುಲಿಂಗ ವಾಲ್ದೊಡ್ಡಿ ತಿಳಿಸಿರುತ್ತಾರೆ.