ನಾಳೆ ಮಹಾಂತ ಶ್ರೀ ಪ್ರಶಸ್ತಿ ಪ್ರಧಾನ, ಜಾನಪದ ಸಂಭ್ರಮ-ಗೋನಾಳ

ರಾಯಚೂರು.ನ.21-ಮಾತೃಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನ ಹಾಗೂ ಪ್ರತಿಭಾ ಸುಗಮಸಂಗೀತ ಸಂಸ್ಥೆಯ 11ನೇಯ ವಾರ್ಷಿಕೋತ್ಸವದ ಅಂಗವಾಗಿ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಹಾಗೂ ಜಾನಪದ ಸಂಭ್ರಮ2020 ಕಾರ್ಯಕ್ರಮವನ್ನು ನಾಳೆ ಅಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಾ ಸುಗಮಸಂಗೀತ ಸಂಸ್ಥೆಯ ಅದ್ಯಕ್ಷರಾದ ಡಾ.ಶರಣಪ್ಪ ಗೋನಾಳ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೊರೊನ ಹಿನ್ನೆಲೆಯಲ್ಲಿ ಈ ಬಾರಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಅಮ್ಮಿಕೊಳ್ಳಲಾಗಿದ್ದು, ನಾಳೆ ಸಂಜೆ 5.30ಕ್ಕೆನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾತೃಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನ ಹಾಗೂ ಪ್ರತಿಭಾ ಸುಗಮಸಂಗೀತ ಸಂಸ್ಥೆಯ 11ನೇಯ ವಾರ್ಷಿಕೋತ್ಸವದ ಅಂಗವಾಗಿ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಹಾಗೂ ಜಾನಪದ ಸಂಭ್ರಮ2020 ದ ದಿವ್ಯ ಸನಿಧ್ಯವನ್ನು ಇಲಕಲ್ ಪಟ್ಟಣದ ಚಿತ್ತರಾಗಿ ಸಂಸ್ಥಾನ ಮಠದ ಗುರುಗಳಾದ ಗುರು ಮಹಾಂತಸ್ವಾಮಿಗಳು,ಚೌಕಿಮಠ ಚಿಕ್ಕಸೂಗೂರಿನ ಸಿದ್ದಗಂಗಾ ಮಹಾಸ್ವಾಮಿಗಳು ವಹಿಸಲಿದ್ದಾರೆ, ಉದ್ಘಾಟನೆಯನ್ನು ಮಾಜಿ ಶಾಸಕ ಎ.ಪಾಪರೆಡ್ಡಿ,ಅಧ್ಯಕ್ಷತೆ ಶಾಸಕ ಡಾ.ಶಿವರಾಜ ಪಾಟೀಲ್,ಪ್ರಶಸ್ತಿ ಪ್ರಧಾನ ಮಾಜಿ ವಿಧಾನ ಸಭಾ ಸದಸ್ಯ ಎನ್.ಎಸ್.ಬೋಸರಾಜ,ಮುಖ್ಯ ಅತಿಥಿಗಳಾಗಿ ನಗರ ಸಭೆ ಸದಸ್ಯರಾದ ಈ.ವಿನಯ್ ಕುಮಾರ್, ಡಾ.ಎಸ್. ಬಾಲಾಜಿ, ಎಸ್.ಎಲ್.ಕೇಶವರೆಡ್ಡಿ, ಕೆ. ಶಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರವರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಮಹಾಂತ ಕಾಯಕಯೋಗಿ ಪ್ರಶಸ್ತಿ,ವಿಶೇಷ ಸನ್ಮಾನ,ಮಹಾಂತಶ್ರೀ ಪ್ರಶಸ್ತಿ,ಮಹಾಂತ ಪುರಸ್ಕಾರ ಪ್ರಶಸ್ತಿ, ಆದರ್ಶ ದಂಪತಿ, ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ ಸೇರಿದಂತೆ ಇನ್ನಿರರ ಪ್ರಶಸ್ತಿ ನೀಡಲ್ಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾ ಗೋನಾಳ, ಸಿದ್ದಯ್ಯ ಸ್ವಾಮಿ, ಪ್ರತಿಭಾ ಗೋನಾಳ, ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.