ನಾಳೆ ಮಸ್ಕಿ ಉಪಚುನಾವಣೆ ಫಲಿತಾಂಶ

*ಮತ ಎಣಿಕೆ ೨೧೦ ಅಧಿಕಾರಿಗಳ ನಿಯೋಜನೆ-ಜಿಲ್ಲಾಧಿಕಾರಿ
ರಾಯಚೂರು.ಮೇ.೧.ಹೈ ವೋಲ್ಟೇಜ್ ಮಸ್ಕಿ ಉಪಚುನಾವಣೆಯ ಫಲಿತಾಂಶ ನಾಳೆ ತಿಳಿಯಲಿದ್ದು ಜಿಲ್ಲಾಡಳಿತ ಪೂರ್ವಸಿದ್ಧತೆಯನ್ನು ಮಾಡಲಾಗಿದ್ದು ಇಂದು ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಆರ್.ವೆಂಕಟೇಶ್ ಅವರು ಮತ ಎಣಿಕಾ ಕಾರ್ಯ ಸಿದ್ಧತೆಯನ್ನು ವೀಕ್ಷಿಸಿದರು.
ಅವರಿಂದು ನಗರದ ಎಸ್ ಅರ್ ಪಿ ಎಸ್ ಕಾಲೇಜಿನಲ್ಲಿ ಆಗಮಿಸಿ ನಾಳೆ ನಡೆಯಲಿರುವ ಹೈ ವೋಲ್ಟೇಜ್ ಮಸ್ಕಿ ಉಪಚುನಾವಣೆಯ ಮತ ಎಣಿಕೆ ಕಾರ್ಯದ ಸಿದ್ಧತೆಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ನಾಳೆ ನಾಳೆ ನಡೆಯುವ ಉಪಚುನಾವಣೆಯ ಫಲಿತಾಂಶದ ಪೂರ್ವಸಿದ್ಧತೆಗಳೆಲ್ಲ ಪೂರ್ಣಗೊಂಡಿದೆ ಕೋವಿಡ್ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಕೋವಿಡ್ ತಡೆ ಗಟ್ಟಲು ಹೊಸ ನಿರ್ದೇಶನಗಳನ್ನು ಮಾಡಲಾಗಿದೆ ಈ ನಿರ್ದೇಶನದ ಮೂಲಕ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಒಟ್ಟು ಮೂರು ಮತ ಎಣಿಕೆ ಕೇಂದ್ರಗಳನ್ನು ಮಾಡಲಾಗಿದೆ ಹಿಂದೆ ಎರಡು ಎಣಿಕೆ ಕೇಂದ್ರಗಳಿದ್ದವು ಈ ಬಾರಿ ಮೂರು ಮಾಡಲಾಗಿದೆ ೨೬ ರೌಂಡ್ ಗಳಲ್ಲಿ ಮತ ಎಣಿಕೆ ಮಾಡಲಾಗುತ್ತದೆ.ನಾಳೆ ಮತ ಎಣಿಕೆಯಲ್ಲಿ ಸಂಜೆಯವರೆಗೂ ಫಲಿತಾಂಶ ತಿಳಿಯಬಹುದು.
ಮತ ಎಣಿಕೆ ಸಂದರ್ಭದಲ್ಲಿ ಸುಮಾರು ೨೧೦ ಅಧಿಕಾರಿಗನ್ನು ನಿಯೋಜನೆ ಗೊಳಿಸಲಾಗಿದೆ.
೨೯೦ ಪೊಲೀಸ್ ಸಿಬ್ಬಂದಿಯನ್ನು ಕೂಡ ನಿಯೋಜನೆ ಗೊಳಿಸಲಾಗಿದೆ.
ಮತ ಎಣಿಕೆ ಏಜೆಯೆಂಟ್ ಗಳಿಗೆ ಎರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು ನೆಗಿಟಿವ್ ಬಂದವರಿಗೆ ಮಾತ್ರ ಒಳಗಡೆ ಅವಕಾಶ ನೀಡಲಾಗಿದೆ.
ಮತ ಎಣಿಕಾ ಕೇಂದ್ರಕ್ಕೆ ತೆರಳುವ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು ನೆಗಿಟಿವ್ ಬಂದರಿಗೆ ದಾಖಲಾತಿ ಇದ್ದರೆ ಮಾತ್ರ ಒಳಗಡೆ ಅವಕಾಶ ಇರುತ್ತದೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಚುನಾವಣಾ ಅಭ್ಯರ್ಥಿಗಳ ಏಜೆಂಟ್ ಗಳು ಪಿಪಿ ಕಿಟ್ ಧರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ದುರ್ಗೆಶ್,
ಲಿಂಗಸೂಗೂರು ಸಹಾಯಕ ಆಯುಕ್ತರಾದ ರಾಜಶೇಖರ ಡಂಬಳ,ಸಂತೋಷ ಕಾಮಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.