ನಾಳೆ ಮತ್ತೆ ಫ್ರಾನ್ಸ್‌ನಿಂದ ರಫೆಲ್ ವಿಮಾನ ಆಗಮನ


ನವದೆಹಲಿ,ಮಾ.೩೦- ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೆಲ್ ಯುದ್ಧ ವಿಮಾನಗಳ ಪೈಕಿ ಮೂರು ವಿಮಾನಗಳು ನಾಳೆ ಹರಿಯಾಣದ ಅಂಬಾಲ ಸೇನಾ ನೆಲೆಗೆ ಬಂದಿಳಿಯಲಿದೆ.ಇದರೊಂದಿಗೆ ೧೪ ರಫೆಲ್ ವಿಮಾನಗಳು ಭಾರತೀಯ ವಾಯುಪಡೆಗೆ ಸೇರಿದಂತಾಗುತ್ತದೆ.
ಮುಂದಿನ ತಿಂಗಳು ಮತ್ತೆ ೯ ವಿಮಾನಗಳು ಬರಲಿದ್ದು, ಈ ಪೈಕಿ ೫ ನ್ನು ಪಶ್ಚಿಮ ಬಂಗಾಳದ ಹಶಿಮರ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಐಎಎಫ್‌ನ ಮೂವರು ಪೈಲೆಟ್‌ಗಳು ಈಗಾಗಲೇ ಫ್ರಾನ್ಸ್ ವಾಯು ನೆಲೆಗೆ ತಲುಪಿದ್ದು, ಅಲ್ಲಿಂದ ನಾಳೆ ಬೆಳಿಗ್ಗೆ ೭ ಗಂಟೆಗೆ ಹೊರಟು ಸಂಜೆ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.