ನಾಳೆ ಭೂಮಿಪೂಜೆ

ಹುಬ್ಬಳ್ಳಿ, ಮಾ8: ದಕ್ಷಿಣ ಭಾರತ ಜೈನ ಸಭೆಯ ಶಾಖೆ ದಿಗಂಬರ ಜೈನ್ ಬೋರ್ಡಿಂಗ್ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಬ್ರಾಹ್ಮಿಳಾ ಮಹಿಳಾ ಪರಿಷತ್ ವತಿಯಿಂದ ನೂತನ ವಿದ್ಯಾರ್ಥಿ ನಿಲಯದ ಭೂಮಿ ಪೂಜೆ ಕಾರ್ಯಕ್ರಮವನ್ನು ನಾಳೆ ಸಂಜೆ 5-30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬೋರ್ಡಿಂಗ್ ಚೇರ್ಮನ್ ವಿದ್ಯಾಧರ ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಸಾನಿಧ್ಯವನ್ನು ವರೂರು ಶ್ರೀ ಕ್ಷೇತ್ರ ನವಗ್ರಹ ತೀರ್ಥದ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಹೊಂಬುಜದ ಸ್ವಸ್ತಿ ಶ್ರೀ ಡಾ. ದೇವೆಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಟಿ. ತವನಪ್ಪನವರ, ಆರ್.ಟಿ. ಅಣ್ಣಿಗೇರಿ, ಡಿ.ಪಿ ಕಾಗೇನವರ ಉಪಸ್ಥಿತರಿದ್ದರು.