ನಾಳೆ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಅಕ್ಕಮಹಾದೇವಿ ಪುತ್ಥಳಿ ಅನಾವರಣ

ಭಾಲ್ಕಿ:ಮಾ.25: ಇಲ್ಲಿಯ ಚನ್ನಬಸವಾಶ್ರಮ ಪರಿಸರದಲ್ಲಿ ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಪ್ರತಿಷ್ಠಾನದ ವತಿಯಿಂದ (ಮಾ.26) ಭಾನುವಾರ ಕನ್ನಡದ ಮೊದಲ ಕವಿಯಿತ್ರಿ ಎಂದು ಕರೆಯಲ್ಪಡುವ ಅಕ್ಕಮಹಾದೇವಿ ಅವರ ಪುತ್ಥಳಿ ಅನಾವರಣ ಸಮಾರಂಭ ಜರುಗಲಿದೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಲಿಂಗೈಕ್ಯ ನಮ್ಮ ತಾಯಿ ಲಕ್ಷ್ಮೀಬಾಯಿ ಅವರು ಶರಣ ತತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ಅದರಂತೆ ಬದುಕಿದರು. ಈ ಹಿನ್ನೆಲೆಯಲ್ಲಿ ಅವರ ಸವಿನೆನಪಿಗಾಗಿ ವೈಯಕ್ತಿಕ ದೇಣಿಗೆ ನೀಡಿ ಚನ್ನಬಸವಾಶ್ರಮದಲ್ಲಿ ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಲಾಗಿದೆ ಎಂದರು.

26 ರಂದು ಬೆಳಿಗ್ಗೆ 11ಕ್ಕೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಅಕ್ಕಮಹಾದೇವಿ ಪುತ್ಥಳ ಅನಾವರಣ ಕಾರ್ಯಕ್ರಮ ಕೃಷಿ ಸಾಧಕಿ ಕವಿತಾ ಮಿಶ್ರಾ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ ಉದ್ಘಾಟಿಸಲಿದ್ದಾರೆ.

ಭಾತಂಬ್ರಾ ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಮೇಹಕರ್-ತಡೋಳಾ ಹಿರೇಮಠ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರು, ಆಣದೂರು ವರಜ್ಯೋತಿ ಭಂತೇಜಿ, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಡಾ.ಅಕ್ಕ ಅನ್ನಪೂರ್ಣತಾಯಿ, ಸಾದ್ವಿಮಹಾಂತ ಮುಕ್ತಾಯಿನಾಥ ಮೌಲಿ, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಸಿದ್ಧರಾಮೇಶ್ವರ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ, ಬಸವಲಿಂಗ ದೇವರು, ಬಸವಲಿಂಗ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು.

ಡಾ.ಗಂಗಾಂಬಿಕಾ ತಾಯಿ, ಮಾತೆ ಮೈತ್ರಾದೇವಿ ತಾಯಿ, ಮಾತೆ ಪ್ರಭಾವತಿತಾಯಿ, ಮಾತೆ ಗೋದಾವರಿತಾಯಿ, ಮಾತೆ ಅನ್ನಪೂರ್ಣಮ್ಮತಾಯಿ, ಮಾತೆ ನೀಲಾಂಬಿಕಾತಾಯಿ, ಮಾತೆ ದೇವಮ್ಮತಾಯಿ, ಮಾತೆ ನೀಲಾಂಬಿಕಾತಾಯಿ, ಮಾತೆ ಜಯಶ್ರೀತಾಯಿ, ಮಲ್ಲಮ್ಮ ತಾಯಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಚನ್ನಬಸವಾಶ್ರಮದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಮಹಿಳೆಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಅಕ್ಕಮಹಾದೇವಿ ಲಿಂಗೈಕ್ಯ ಆಗಿರುವ ಶ್ರೀಶೈಲಂ ಕದಳಿ ಬನದಲ್ಲಿ ಮೊಟ್ಟ ಮೊದಲ ಬಾರಿಗೆ ಅಕ್ಕ ಮಹಾದೇವಿ ಅವರ ಮೂರ್ತಿ ಸ್ಥಾಪಿಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಈ ಭಾಗದಲ್ಲಿಯು ಅಕ್ಕಮಹಾದೇವಿ ಪುತ್ಥಳಿ ಸ್ಥಾಪನೆ ಆಗಬೇಕು ಎನ್ನುವುದು ಅವರ ಕನಸಾಗಿತ್ತು.

ಅದರಂತೆ ಶಾಸಕ ಈಶ್ವರ ಖಂಡ್ರೆ ಅವರು ವೈಯಕ್ತಿಕ ದೇಣಿಗೆ ನೀಡಿ ಚನ್ನಬಸವಾಶ್ರಮ ಪರಿಸರದಲ್ಲಿ ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಿರುವುದು ಹರ್ಷ ತರಿಸಿದೆ. ಶಾಸಕ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಅಕ್ಕಮಹಾದೇವಿ ಪುತ್ಥಳಿ ಅನಾವರಣವಾಗುತ್ತಿರುವುದು ಇದೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಜಿಲ್ಲೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಡಿವಾಳಪ್ಪ ಮಂಗಲಗಿ, ಮಲ್ಲಮ್ಮ ನಾಗನಕೇರೆ ಇದ್ದರು.


ಸಾಧಕ ಮಹಿಳೆಯರಿಗೆ ಸನ್ಮಾನ

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ. ರತ್ನಮ್ಮ ನಾಗಯ್ಯ ಸ್ವಾಮಿ ಭಾಲ್ಕಿ, ನಾಗಮ್ಮ ಬಸವರಾಜ ಪಾಟೀಲ್ ಭಾಲ್ಕಿ, ಶುಭಾಂಗಿ ಚನ್ನಬಸವ ಬಳತೆ ಭಾಲ್ಕಿ, ಜೀವಲತಾ ಸಿಸ್ಟರ್, ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ, ಡಾ.ಶೈಲಜಾ ತಳವಾಡೆ, ಡಾ.ಸುಪ್ರಿಯ ಪಾಟೀಲ್, ದೇವಕ್ಕ ಶರಣಪ್ಪ ಅಳ್ಳೆ, ಪದ್ಮಾ ಬಸವರಾಜ ವೈರಾಗೆ, ಸುನಿತಾ ಮಹಾದೇವ ಬುಳ್ಳಾ, ಜಯಶ್ರೀ ಪ್ರಕಾಶ ಮಾನಕಾರಿ, ಸುಜಾತಾ ದತ್ತಾತ್ರಿ ಹಾಳೆ, ಕೀರ್ತಿ ಧನರಾಜ ಮಸ್ಕಲೆ, ಸುವರ್ಣ ಓಂಕಾರ ಬಲ್ಲೂರೆ, ಗೀತಾ ನಿಜಲಿಂಗಪ್ಪ ಪಾಟೀಲ್, ಮೀನಾ ಸಂಗಮೇಶ ಕಾರಾಮುಂಗೆ, ಅನಿತಾ ಸೂರ್ಯಕಾಂತ ಪಾಟೀಲ್, ಪೂಜಾ ರಾಜಶೇಖರ ಕೊಡಗೆ, ಸುನಿತಾ ಮಹಾದೇವಪ್ಪ ದೇಬಸಪ್ಪ, ಡಾ.ಎಂ.ಮಕ್ತುಂಬಿ, ಮೇರಿ ಕೋಸಂ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಶಾಸಕ ಖಂಡ್ರೆ ತಿಳಿಸಿದರು.