ನಾಳೆ ಭರತನಾಟ್ಯ ಕಾರ್ಯಕ್ರಮ

ಬೆಂಗಳೂರು, ಮೇ ೧೪- ಭರತನಾಟ್ಯ ಕಲಾವಿದೆ, ಗುರು ಸುಮಿತ್ರಾ ನಿತಿನ್ ಅವರ ಶಿಷ್ಯೆ ಕು. ಎಸ್. ಸೌಂದರ್ಯ ಅವರ ಭರತ ನಾಟ್ಯ ಆರಂಗೇಟ್‌ರಂ ಕಾರ್ಯಕ್ರಮ ನಾಳೆ ಸಂಜೆ ೬ ಗಂಟೆಗೆ ಜಯನಗರದ ೮ನೇ ಬ್ಲಾಕ್‌ನ ಜೆಎಸ್‌ಎಸ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿ.ವಿ. ಸುಂದರಂ, ಭರತನಾಟ್ಯ ಪ್ರವೀಣೆ ನಿತ್ಯಾ ಕಲಾನಿಧಿ ಪ್ರಿಯದರ್ಶಿನಿ ಗೋವಿಂದ್, ರಾಜ್ಯ ಸಂಗೀತ ನಿತ್ಯ ಅಕಾಡೆಮಿ ಅಧ್ಯಕ್ಷ ಅನೂರ್ ಆರ್. ಅನಂತಕೃಷ್ಣ ಶರ್ಮ ಅವರು ಆಗಮಿಸಲಿದ್ದಾರೆ.
ನಾಟ್ಯ ಶೃತಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿರುವ ಕು.ಎಸ್. ಸೌಂದರ್ಯ ಅವರು ನಾಳೆ ನೃತ್ಯ ಪ್ರದರ್ಶನ ಮಾಡಲಿದ್ದಾರೆ.