
ಭಾಲ್ಕಿ:ಎ.17:ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಹಾಗೂ ವಚನ ಜಾತ್ರೆ-2023 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 24ನೇ ಸ್ಮರಣೋತ್ಸವ ನಿಮಿತ್ತ ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯಲಿದೆ.
ಹಿರೇಮಠ ಸಂಸ್ಥಾನದಲ್ಲಿ ಅಂದು ಬೆಳಿಗ್ಗೆ 8ಕ್ಕೆ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಯುವ ಮುಖಂಡ ಆಕಾಶ ರಿಕ್ಕೆ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.
ವಚನ ಪಾರಾಯಣ ಸಮಿತಿ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಬಾಲಬಸವಣ್ಣ ವೇಷಭೂಷಣ ಸಮಿತಿ ಅಧ್ಯಕ್ಷೆ ಶುಭಾಂಗಿ ಬಳತೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಾ.ಅಮಿತ ಅಷ್ಟೂರೆ, ಮೆರವಣಿಗೆ ಸಮಿತಿ ಅಧ್ಯಕ್ಷ ಜೈರಾಜ ಪಾತ್ರೆ, ಅಲಂಕಾರ ಸಮಿತಿ ಅಧ್ಯಕ್ಷ ಕಿರಣ ಖಂಡ್ರೆ, ಮೆರವಣಿಗೆ ಮಹಿಳಾ ಸಮಿತಿ ಅಧ್ಯಕ್ಷೆ ಮಹಾನಂದಾ ಮಾಶೆಟ್ಟೆ, ಬೈಕ್ ರ್ಯಾಲಿ ಸಮಿತಿ ಅಧ್ಯಕ್ಷ ಈಶ್ವರ ರುಮ್ಮಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.