ನಾಳೆ ಬಿ ಜೆ ಪಿ ಪಕ್ಷದ ಎಸ್ ಸಿ ಮೋರ್ಚಾ ಸಭೆ

ಹರಿಹರ.ಮಾ.22  ಭಾರತೀಯ ಜನತಾ  ಪಕ್ಷದ ಕಾರ್ಯಕರ್ತರಾದ ನಾವುಗಳೆಲ್ಲರೂ ಪಕ್ಷದ ಸಿದ್ಧಾಂತಕ್ಕೆ ಯಾವಾಗಲೂ ಬದ್ಧರಾಗಿದ್ದು ಪಕ್ಷ ಹೇಳಿದವರ ಪರ ಕೆಲಸ ಮಾಡುತ್ತೇವೆ ಎಂದು ನಗರಸಭೆ ಸದಸ್ಯ ಎನ್. ರಜನಿಕಾಂತ್ ಹೇಳಿದರು.
    ನಗರದ ಪತ್ರಿಕಾಭವನದಲ್ಲಿ   ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹರಿಹರ ನಗರದ ಭಾಜಪ ಪಕ್ಷದಲ್ಲಿ ಕೆಲವು ಗೊಂದಲಗಳಿವೆಯೆ.?  ನಾವು ಪಕ್ಷದ ಸಿಪಾಯಿಗಳು ಪಕ್ಷ ಮುಂದಿನ ಚುನಾವಣೆ ಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ . ಪಕ್ಷದಲ್ಲಿ ಅನೇಕರು ಟಿಕೆಟ್ ಆಕಾಂಕ್ಷಿಗಳು ಇರಬಹುದು ಆದರೆ ಎಲ್ಲರೂ ಪಕ್ಷಕ್ಕಾಗಿ ದುಡಿಯಬೇಕಾದ ಜವಾಬ್ದಾರಿ ಇದ್ದು ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ ಮತ್ತು ಪಕ್ಷವನ್ನು ಗೆಲ್ಲಿಸುವಲ್ಲಿ ಸರ್ವ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ನಗರ ಎಸ್ಸಿ ಮೋರ್ಚಾದ ಅಧ್ಯಕ್ಷ ಸಂತೋಷ್ ಗುಡಿಮನಿ  ಮಾತನಾಡಿ ನಾಳೆ  ಬೆಳಗ್ಗೆ 11 ಗಂಟೆಗೆ ನಗರದ ಕಾಟ್ವೆ ಭವನದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ನಗರ ಗ್ರಾಮಾಂತರ ಘಟಕದ ಹರಿಹರ ವಿಧಾನಸಭಾ ಕ್ಷೇತ್ರ ವತಿಯಿಂದ ಎಸ್ ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದೆ.     ಈ ಸಭೆಯಲ್ಲಿ ಭಾಜಪ ಜಿಲ್ಲಾಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ,ಮಾಜಿ ಶಾಸಕ ಬಿ.ಪಿ.ಹರೀಶ್, ಜಿ.ಪಂ. ಸದಸ್ಯ ಬಿ.ಎಂ.ವಾಗೀಶ ಸ್ವಾಮಿ, ರಾಜ್ಯ ಸಮಿತಿ ಸದಸ್ಯರುಗಳಾದ ಬಸವರಾಜ ನಾಯಕ್, ಈಶಪ್ಪ ಕಟ್ಟಿಮನಿ, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಹನುಮಂತ ನಾಯಕ್, ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ ಸೇರಿದಂತೆ ತಾಲೂಕಿನ ಎಲ್ಲಾ ನಗರಸಭೆ, ಗ್ರಾ.ಪಂ, ತಾ.ಪಂ. ಸದಸ್ಯರು ಹಾಗೂ ಎಲ್ಲಾ ವಿಭಾಗಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.     ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್ ಮಾತನಾಡಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ನಗರದ ಅಭಿವೃದ್ಧಿ ಸಲುವಾಗಿ ಅನವಶ್ಯಕವಾಗಿ ಯಾವುದೇ ಪ್ರತಿಭಟನೆಗಳನ್ನು ಮಾಡದೆ ನಾವು ನಗರಸಭೆ ಯವರೊಂದಿಗೆ ಸಂಪೂರ್ಣ ಸಹಕಾರ ನೀಡಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.ಗ್ರಾಮಾಂತರ ಅಧ್ಯಕ್ಷ ಎಂ ನಾಗರಾಜ್ .ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ .ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು