ನಾಳೆ ಬಿಬಿಎಂಪಿ ವಿಶೇಷ ಸಭೆ

ಬೆಂಗಳೂರು, ಏ.೪- ಇದೇ ತಿಂಗಳು ೨೭ಕ್ಕೆ ನಡೆಯಲಿರುವ ಬೆಂಗಳೂರಿನ ಐತಿಹಾಸಿಕ ಕರಗ ಆಚರಣೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ನಾಳೆ(ಏ.೫)ಗೌರವ್ ಗುಪ್ತ ವಿಶೇಷ ಸಭೆ ಕರೆದಿದ್ದಾರೆ.
ಚರ್ಚೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳು ಸ್ಥಳೀಯ ಶಾಸಕ, ಸಂಸದ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ನು ಕೋವಿಡ್ ನಿಯಮದಿಂದ ಯಾವುದೇ ಹಬ್ಬ, ಜಾತ್ರೆ ಹಾಗೂ ಕರಗಗಳಿಗೆ ತಾತ್ಕಾಲಿಕ ತಡೆಯನ್ನು ಸರ್ಕಾರ ನೀಡಿದೆ.
ಕಳೆದ ಬಾರಿ ಲಾಕ್‌ಡೌನ್ ಇದ್ದರೂ ಸಾಂಪ್ರದಾಯಿಕವಾಗಿ ಕರಗ ಆಚರಿಸಲಾಗಿದೆ. ಇದೇ ತಿಂಗಳು ೨೭ಕ್ಕೆ ನಡೆಯಲಿರುವ ಬೆಂಗಳೂರು ಕರಗವನ್ನು ಕಳೆದ ಬಾರಿಯಂತೆ ಈ ಬಾರಿಯೂ ಆಚರಣೆ ಮಾಡಬೇಕಾ ಅಥವಾ ಕೊರೊನಾ ಆತಂಕದ ನಡುವೆ ಸರಳ ಕರಗ ಆಚರಣೆ ಒಳಿತಾ ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ.