ನಾಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ 12 ಸ್ಥಾನಗಳಿಗೆ 30 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ : ಅವಿಭಾಜಿತ ಬಳ್ಳಾರಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ (ವಿಜಯನಗರ ಹಾಗೂ ಬಳ್ಳಾರಿ) ಬಿಡಿಸಿಸಿ ಬ್ಯಾಂಕ್‍ಗೆ ಚುನಾವಣೆ ಅಕ್ಟೋಬರ್ 15 ರ ನಾ|ಳೆ ನಡೆಯುವ ಚುನಾವಣೆಗೆ 12 ನಿರ್ದೇಶಕ ಸ್ಥಾನಗಳಿಗೆ 30 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ನಡೆಯಲಿದೆ.
ಮತದಾರರು ಮತ ಚಲಾಯಿಸಲು ಸುಗಮ ಮತದಾನಕ್ಕೆ ಚಿನ್ನೆಗಳ ಹಂಚಿಕೆ, ನಾಮಪತ್ರಗಳ ಮುದ್ರಣ, 12 ಬೂತ್‍ಗಳಲ್ಲಿ ಮತದಾನಕ್ಕೆ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಸುಗಮ ಮತದಾನಕ್ಕೆ ಪೊಲೀಸ ಬಂದೋಬಸ್ತ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು ಯಾವುದೆ ತೊಂದರೆಯಾಗದಂತೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಆದ ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹತಾ ಸಂಜೆವಾಣಿಗೆ ತಿಳಿಸಿದರು.
ರಾಜಕೀಯ ರಂಗು 
ಹಾಲಿ, ಮಾಜಿ ಶಾಸಕರೂ ಸಹಕಾರಿ ರಂಗದ ಚುನಾವಣಾ ಅಖಾಡಕ್ಕೆ ಧುಮ್ಮುಕ್ಕುತ್ತಿರುವುದು ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಮುಂಚೆಯಿಂದಲೂ ಸಹಕಾರಿಗಳಾಗಿ ಶಾಸಕರಾಗಿದ್ದ ಸಿರಗುಪ್ಪದ ಟಿ.ಎಂ.ಚಂದ್ರಶೇಖರಯ್ಯ, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಹಾಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್  ಮಾಜಿ ಸಚಿವ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳ ಹಿಂಬಾಲಕರು ಪಾಲ್ಗೊಂಡಿರುವುದರಿಂದ ರಾಜಕೀಯ ರಂಗು ಪಡೆದುಕೊಂಡಿದೆ. 
4 ಕ್ಷೇತ್ರಗಳ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆ ಪೈಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕ್ಷೇತ್ರದಿಂದ 9 ಸ್ಥಾನಗಳಿಗೆ ಕೃಷಿ ಉತ್ಪನ್ನ ಮಾರಾಟ ಕ್ಷೇತ್ರ, ಪತ್ತಿನ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳ ಕ್ಷೇತ್ರ, ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ತಲಾ ಒಂದು ಸ್ಥಾನಕ್ಕೆ 30 ಅಭ್ಯರ್ಥಿಗಳು ಆಯ್ಕೆ ಮಾಡಬೇಕಾಗಿದೆ
ಅಪೇಕ್ಸ್ ಬ್ಯಾ|ಂಕ್ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚೊಕ್ಕ ಬಸವನಗೌಡ ಹಾಗೂ ಮಾಜಿ ಸಚಿವ ಆನಂದಸಿಂಗ್ ಸಂಬಂಧಿ ಸಂದೀಪ್‍ಸಿಂಗ್, ನಗರಸಭೆಯ ಸದಸ್ಯ ಎಲ್.ಎಸ್.ಆನಂದ್ ಹಿಂದೆ ನಿರ್ದೇಶಕರಾಗಿ ಸದ್ಯ ಶಾಸಕ ಹೆಚ್.ಆರ್.ಗವಿಯಪ್ಪರೊಂದಿಗೆ ಗುರುತಿಸಿಕೊಂಡಿರುವ ಅನಿಲ್ ಜೋಶಿ ಚುನಾವಣೆಯ ಕಣದಲ್ಲಿದ್ದು ತೀವೃ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ ನಾಳೆ ಬೆಳಿಗ್ಗೆ 9 ಗಂಟೆಯಿಂದ ಚುನಾವಣೆ ಆರಂಭವಾಗಿ 4 ಗಂಟೆಗೆ ಅಂತ್ಯಗೊಳ್ಳಲಿದ್ದು ನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ .
ಯಾವುದೆ ಗೊಂದಲಗಳು ಆಗದಂತೆ ನೋಡಲು ಪೊಲೀಸ್ ಬಂದೋಬಸ್ತ್ ಸಹ ಆಯೋಜಿಸಲಾಗದ್ದು ಮತದಾರರ ಹೊರತಾಗಿ ಯಾರು ಬ್ಯಾಂಕ್ ಪ್ರವೇಶ ಮಾಡದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.