ನಾಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ

ಲಕ್ಷ್ಮೇಶ್ವರ.ಜು.19: ಗದಗ್ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆ ದಿನಾಂಕ 20 ರಂದು ಬುಧವಾರ ಬೆಳಿಗ್ಗೆ 10:00 ಗಂಟೆಗೆ ಬಾಳೆಹಳ್ಳಿ ಮಠ ಅವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಿದ್ದೇಶ ಹೂಗಾರ ಮತ್ತು ಮಾಧ್ಯಮ ಪ್ರಮುಖ ಅನಿಲ್ ಧರಣ್ಣವರ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಪ್ರದೇಶ ಬಿಜೆಪಿ ರಾಜ್ಯ ಘಟಕದ ಸೂಚನೆಯ ಮೇರೆಗೆ ಇದೇ ಮೊದಲ ಬಾರಿ ಜಿಲ್ಲಾ ಕೇಂದ್ರವನ್ನು ಹೊರತುಪಡಿಸಿ ಮೊಟ್ಟ ಮೊದಲ ಬಾರಿ ತಾಲೂಕ ಮಟ್ಟದಲ್ಲಿ ಕಾರ್ಯಕಾರಿ ಣಿ ನಡೆಯುತ್ತಿದೆ ಎಂದು ಹೇಳಿದ ಅವರು ಜಿಲ್ಲೆಯ ಒಂಬತ್ತು ಮಂಡಲಗಳಿಂದ ಪ್ರತಿಯೊಂದು ಮಂಡಳದಿಂದ 12 ಜನ ಕಾರ್ಯಕರ್ತರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿಸಿ ಪಾಟೀಲ್ ನೆರವೇರಿಸಲಿದ್ದು ಕಾರ್ಯಕ್ರಮದಲ್ಲಿ ಶಾಸಕರಾದ ರಾಮಣ್ಣ ಲಮಾಣಿ ಕಳಕಪ್ಪ ಬಂಡಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ಗೌಡ ಹಿರೇಮನಿ ಪಾಟೀಲ ಅವರು ವಹಿಸಲಿದ್ದು ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ ರ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದರು.
ಶಿರಹಟ್ಟಿ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ನವೀನ್ ಹಿರೇಮಠ ಅವರು ಮಾಹಿತಿ ನೀಡಿ ಇದೇ ಮೊದಲ ಬಾರಿ ಜಿಲ್ಲಾ ಮಟ್ಟದ ಕಾರ್ಯಕಾರಿ ಣಿ ನಡೆಯುತ್ತಿದ್ದು ಯಶಸ್ವಿಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ದುಂಡೇಶ್ ಕೊಟ್ಟಗಿ ಮಂಡಲ್ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮೆಣಸಿನಕಾಯಿ ಲಕ್ಷ್ಮಣ್ ಲಮಾಣಿ ಸಂತೋಷ್ ಜಾವೂರ್ ವಿಜಯ ಕುಂಬಾರ್ ಮಾರುತಿ ಸತ್ಯಮನವರ ಶಕ್ತಿ ಕತ್ತಿ ಶರಣು ಚನ್ನೂರ್ ಭೀಮಪ್ಪ ಎಂಗಾಡಿ ಸೇರಿದಂತೆ ಅನೇಕರಿದ್ದರು.
ಂಣಣಚಿಛಿhmeಟಿಣs ಚಿಡಿeಚಿ