ನಾಳೆ ಬಾದಾಮಿ ಮತಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ

ಬಾದಾಮಿ,ಜ22: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥ ಯಾತ್ರೆಯು ಜ.23 ರಂದು ಸೋಮವಾರ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ, ಮಾಜಿ ಜಿ.ಪಂ.ಉಪಾಧ್ಯಕ್ಷ ಹನಮಂತ ಮಾವಿನಮರದ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷದಿಂದ ನಡೆಯುತ್ತಿರುವ ಪಂಚ ರತ್ನ ರಥಯಾತ್ರೆಯೂ ಬಾಗಲಕೋಟ್ ಜಿಲ್ಲೆಗೆ ಆಗಮಿಸಲಿದೆ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜನವರಿ 23ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಬಾದಾಮಿ ಮತಕ್ಷೇತ್ರದ ಗುಳೆದಗುಡ್ಡ ಪಟ್ಟಣದಲ್ಲಿ ಹರದೊಳ್ಳಿ ಮಾರುತೇಶ್ವರ ದೇವಸ್ಥಾನದಿಂದ ಪುರಸಭೆಯವರೆಗೆ ರಥಯಾತ್ರೆ ಮೆರವಣಿಗೆ ನಡೆಯಲಿದ್ದು, ನಂತರ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ನೇಕಾರ ಕುಟುಂಬಕ್ಕೆ ಭೇಟಿ ನೀಡಲಿದ್ದಾರೆ ನಂತರ ಆ ಪಟ್ಟಸಾಲಿ ಸಮಾಜದ ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು.
ಅನಂತರ ತೋಗುಣಸಿ, ಕೆಲವಡಿ, ತಿಮ್ಮಸಾಗರ, ಕೊಂಕೊಣಕೊಪ್ಪ, ಲಕ್ಕಸಕೊಪ್ಪ ಗ್ರಾಮಗಳಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 12 ಗಂಟೆಗೆ ಬಾದಾಮಿ ಮತಕ್ಷೇತ್ರದ ಕೆರೂರು ಪಟ್ಟಣಕ್ಕೆ ರಥಯಾತ್ರೆ ಆಗಮಿಸಲಿದ್ದು, ಕೆರೂರ ಪಟ್ಟಣದ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಸಂಚರಿಸಿ ಎ.ಆರ್.ಹಿರೇಮಠ ಪ್ರೌಢಶಾಲೆಯಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳುವರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲೂಕಾ ಜೆಡಿಎಸ್ ಅಧ್ಯಕ್ಷ ಪ್ರಕಾಶ ಗಾಣಿಗೇರ, ಮಹಮ್ಮದ ತೊಯಬ ಅಲಿ ಖಲಿಫ, ಪ್ರಕಾಶ ಕೋಟಿ, ನಂದನಗೌಡ ಕೋಟಿ, ಮಲ್ಲಿಕಾರ್ಜುನ ಹಡಪದ, ಹುಚ್ಚಪ್ಪ ಹದ್ದನ್ನವರ, ಎಂ.ಎಚ್.ಚಂದನ್ನವರ, ಎಂ.ಎಸ್.ಹಿರೇಹಾಳ, ರಿಯಾಜ ಜಮಾದಾರ, ರವಿ ಹಳ್ಳಿ, ಶರಣಪ್ಪ ಮಾವಿನಮರದ, ಬೆಳಗೇರಿ ಹಂಡೆನ್ನವರ, ಉಮೇಶ ಹಾದಿಮನಿ, ನಿಂಗಪ್ಪ ಮಾದರ, ಭರಮಪ್ಪ ಪರಸನ್ನವರ, ಮುತ್ತಪ್ಪ ಗಾಡಗೋಳ, ಅರ್ಜುನ ಪೂಜಾರಿ, ರಮೇಶ ವಗ್ಗನ್ನವರ, ಮಾಂತು ತಳವಾರ, ಬಸವರಾಜ ಅಮರಗೋಳ, ಮೈಬೂಬ ಬೈರಾಗಿ, ದುರ್ಗಪ್ಪ ಮೇಟಿ, ಬಾಳಪ್ಪ ಮಾದರ, ಚಂದ್ರಶೇಖರ ಸೂಡಿ, ಪಕ್ರುಸಾಬ ಕಡಕೋಳ, ಸಂತೋಷ ಬೇನಾಳ, ಹುಸೇನಸಾಬ ಹೊಸರೊಟ್ಟಿ, ಬುಡ್ಡಾ ಮುಲ್ಲಾ, ಅಲ್ಲಾವುದ್ದೀನ ಲೋಕಾಪೂರ ಹಾಜರಿದ್ದರು.