ನಾಳೆ ಬಸವಕಲ್ಯಾಣದಲ್ಲಿ ಜಿರೋ ಸಂಚಾರ ನಿರ್ವಹಣೆಗೆ ಜಿಲ್ಲಾಧಿಕಾರಿ ಆದೇಶ

ಬೀದರ,ಮಾ.02:ಭಾರತ ಸರ್ಕಾರದ ಗೃಹ ಮಂತ್ರಿಗಳಾದ ಅಮಿತ್ ಶಾ, ಭಾರತ ಸಹಕಾರದ ಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನೊಳಗೊಂಡ ಗಣ್ಯಾತಿಗಣ್ಯರು ಮಾರ್ಚ 03 ರಂದು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 31 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮಾರ್ಚ 3 ರಂದು ಬೆಳಿಗ್ಗೆ 8 ಗಂಟೆಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತದಿಂದ ಸಸ್ತಾಪೂರ ಬಂಗ್ಲಾದ ರಾ.ಹೆ.ನಂ.65 ರವರೆಗಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರ ಮಾರ್ಗವನ್ನು ಪರ್ಯಾಯ ಮಾರ್ಗವನ್ನು ಮತ್ತು ಪಾರ್ಕಿಂಗ್ ಸ್ಥಳಗಳ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ

ಪರ್ಯಾರ್ಯ ಮಾರ್ಗಗಳ ವಿವರ: ಹುಮನಾಬಾದ ಕಡೆಯಿಂದ ಬರುವ ಮತ್ತು ಹೋಗುವ ಸಾರ್ವಜನಿಕ ವಾಹನಗಳಿಗೆ ಕೌಡಿಯಾಳ (ರಾ.ಹೆ.ನಂ. 65), ಶಿವಪೂರ ನಾಗಣ್ಣ ಕಟ್ಟೆ, ಸಾಯಿ ವಿದ್ಯಾಮಂದಿರ, ವೈಭವ ಕಾಂಪ್ಲೆಕ್ಸ್, ನಾರಾಯಣಪೂರ ಕ್ರಾಸ್‍ದಿಂದ ಬಸ್ ನಿಲ್ದಾಣದವರೆಗೆ.

ಮಂಠಾಳ-ಉಮರ್ಗಾ ಕಡೆಯಿಂದ ಬುವ ಮತ್ತು ಹೋಗುವ ಸಾರ್ವಜನಿಕ ವಾಹನಗಳಿಗೆ ಖಾನಾಪೂರ ಕ್ರಾಸ್ (ರಾ.ಹೆ.ನಂ.65), ನೀಲಕಂಠವಾಡಿ ಕ್ರಾಸ್, ಖಾನಾಪೂರ ವಾಡಿ ಕ್ರಾಸ್, ಖಾನಾಪೂರ ಗ್ರಾಮ, ಪರತಾಪೂರ ಕ್ರಾಸ್, ಗಾಂಧಿಚೌಕ, ಖಿಲ್ಲಾರೋಡ್, ಮುಂಡೆಪಾಳ್ಯದಿಂದ ಬಸ್ ನಿಲ್ದಾಣದವರೆಗೆ.

ಮಾರ್ಚ 3 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗÀಂಟೆಯವರೆಗೆ ಎಲ್ಲಾ ಭಾರಿ ವಾಹನಗಳು ಎಲ್ಲಾ ದಿಕ್ಕುಗಳಿಂದಲೂ ಕೆಲವು ಸಮಯದವರೆಗೆ ಬಸವಕಲ್ಯಾಣ ನಗರ ಪ್ರವೇಶಿಸುವುದನ್ನು ಹಾಗೂ ಸಂಚರಿಸುವುದನ್ನು ನಿಷೇಧಿಸುವುದು.

ಪಾರ್ಕಿಂಗ್ ವ್ಯವಸ್ಥೆ ವಿವರ: ಕೋಹಿನೂರ ಮಂಠಾಳ ವಲಯಗಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹನಗಳು ಬಸವಕಲ್ಯಾಣ ನಗರದ ಖಾನಾಪೂರ(ಕೆ) ರೋಡಿಗೆ ಇರುವ ಕೌಟೆ ಪೆಟ್ರೋಲ್ ಪಂಪ್ ಎದುರುಗಡೆ ಖುಲ್ಲಾ ಜಾಗೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.

ಮುಡುಬಿ ವಲಯ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹನಗಳು ಬಸವಕಲ್ಯಾಣ ನಗರದ ಹರಳಯ್ಯ ಗವಿಯ ಎದುರುಗಡೆ ಕಠಾರೆ ಅವರ ಖುಲ್ಲಾ ಜಾಗೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.

ರಾಜೇಶ್ವರ, ನಾರಾಯಣಪೂರ ವಲಯಗಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹನಗಳುಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಇರುವ ವಕಾರೆ ಆಟೋಮೊಬೈಲ್ ಎದುರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.