ಕಲಬುರಗಿ,ಜೂ 3:ಯುವಾ ಬ್ರಿಗೇಡ್ ಸಂಘಟನೆ ರಾಜ್ಯದಾದ್ಯಂತ ಸರಕಾರಿ ಶಾಲೆಗಳಿಗೆ ಬಣ್ಣ ಹಚ್ಚಿ ಗೌರವ ಸಮರ್ಪಿಸಲು ಆಲೋಚಿಸಿದೆ.ಸಂಘಟನೆಯ 9 ಸಂವತ್ಸರಗಳ ಸಂಭ್ರಮವೂ ಇದೇ ಸಂದರ್ಭದಲ್ಲಿ ಒದಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಕಲಬುರಗಿ ತಂಡದ ವತಿಯಿಂದ ಅಫಜಲಪುರ ತಾಲೂಕಿನ ಬಳೂರಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಾಳೆ ( ಜೂ 4) ಬೆಳಿಗ್ಗೆ 7 ಗಂಟೆಯಿಂದ ಬಣ್ಣ ಹಚ್ಚುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ನಾವೆಲ್ಲರೂ ಸೇರಿ ಈ ಕಾರ್ಯದಲ್ಲಿ ತೊಡಗಿಕೊಂಡು ಸಂಘಟನೆಯ ವರ್ಷಾಚರಣೆಯನ್ನು ಕನ್ನಡ ಶಾಲೆಯ ಬಣ್ಣ ಹಚ್ಚುವ ಮೂಲಕ ಇನ್ನಷ್ಟು ಅರ್ಥಪೂರ್ಣವಾಗಿಸೋಣ. ಎಲ್ಲರೂ ಬನ್ನಿ ಎಂದು ರಾಹುಲ್ ಸುತಾರ ಆಹ್ವಾನಿಸಿದ್ದಾರೆ.ಮಾಹಿತಿಗೆ 7760111119 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.