ನಾಳೆ ಬಂಡ್ರಾಳ್ ನಲ್ಲಿ ಪುಣ್ಯಸ್ಮರಣೆ

ಬಳ್ಳಾರಿ ಏ 03 : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಗ್ರಾಮದ ಪೊಂಪಯ್ಯ ತಾತನವರ ಮಠದಲ್ಲಿ ನಾಳೆ ಶ್ರೀ ಉಜ್ಜಯನಿ ಲಿಂ|| ಸಿದ್ದಲಿಂಗ ಭಗವತ್ಪಾದರ 85ನೇ ಪುಣ್ಯಸ್ಮರಣೆ, ಶ್ರೀ ಪುಟ್ಟರಾಜ ಕವಿಗವಾಯಿಗಳ 11ನೇ ಪುಣ್ಯಸ್ಮರಣೆ ಹಾಗೂ ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 29ನೇ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ: 5.30ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮೂರ್ತಿಗೆ ಮತ್ತು ಲಿಂ|| ಶ್ರೀ ಪೊಂಪಯ್ಯತಾತನವರ ಕತೃಗದ್ದಿಗೆಗೆ ರುದ್ರಾಭಿಷೇಕ ನಡೆಯುವುದು.
ಸಂಜೆ: ಲೋಕ ಕಲ್ಯಾಣಕ್ಕಾಗಿ ಮತ್ತು ಕರೋನ ಮಹಾಮಾರಿ ನಿಯಂತ್ರಣಕ್ಕಾಗಿ ರುದ್ರಹೋಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ|| ಬ್ರ|| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹರಗಿನಡೋಣಿ ಪೂಜ್ಯರು ವಹಿಸಲಿದ್ದಾರೆ. ನೇತೃತ್ವವನ್ನು ಶ್ರೀ ಶಿವರುದ್ರಪ್ಪ ತಾತನವರು ಮುತ್ತಿನಪೆಂಡೆಮಠ ಇವರ ವಹಿಸಲಿದ್ದಾರೆ.
ಶ್ರೀ ರಾಜಶೇಖರ್ ಸ್ವಾಮಿ ತೆಕ್ಕಲಕೋಟೆ, ಶ್ರೀ ವಿರೇಶಯ್ಯ ಶಾಸ್ತ್ರಿಗಳು ಕಂಭಾಳಿಮಠ, ಶ್ರೀ ಶರಣಯ್ಯಶಾಸ್ತ್ರಿಗಳು ಸಿದ್ದರಾಂಪುರ ಇವರ ಸಮ್ಮುಖದಲ್ಲಿ ರುದ್ರ ಹೋಮ ಕಾರ್ಯಕ್ರಮ ನಡೆಯುವುದು.
ನಾಳೆ ಬೆಳಿಗ್ಗೆ 10.30 ರಿಂದ ಸಂಜೆ 2.00ಗಂಟೆಯವರೆಗೆ ವಿಶೇಷವಾಗಿ ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 29ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ, ಶ್ರೀ ಪುಟ್ಟರಾಜ ಕವಿ ಗವಾಯಿಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ತಾರನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ ಇವರ ಸಂಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಮತ್ತು ಕರೋನ ನಿಯಂತ್ರಣ ಔಷಧಗಳನ್ನು ನೀಡಲಾಗುವುದು ಎಂದು ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ತಿಳಿಸಿದ್ದಾರೆ.