
ಹೊಸಪೇಟೆ: ಮಾನವನ ಶರೀರದಲ್ಲಿ ಪಂಚವಾಯುಗಳ ಮಹತ್ವ, ಸೊಂಟ ನೋವು ಮತ್ತು ನರಗಳ ಸಂಬಂಧ ಸೂರ್ಯ ನಮಸ್ಕಾರ (ಆಹಾರ ಪದ್ಧತಿ ಮತ್ತು ಜೀವನ ಶೈಲಿ) ಮತ್ತು ಆಸನಗಳು ಮುದ್ರೆಗಳು ಮತ್ತು ವಿಶೇಷ ಪ್ರಾಣಾಯಾಮಗಳ ಮಹತ್ವ ತಿಳಿಸಲು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಹಾಗೂ ವಿಜಯನಗರ ಮತ್ತು ಗದಗ ಜಿಲ್ಲಾ ಉಸ್ತುವಾರಿಗಳಾದ ಡಾ. ಎಸ್ ಬಿ ಹಂದ್ರಾಳ ಅವರು ವಿಶೇಷ ಯೋಗ ತರಬೇತಿ ನೀಡಲಿದ್ದಾರೆ.ನಾಳೆ ಭಾನುವಾರ ಬೆಳಿಗ್ಗೆ 5.15 ನಿಮಿಷದಿಂದ 7.15 ನಿಮಿಷದ ವರೆಗೂ ನಡೆಯುವ ತರಬೇತಿಯ ಪ್ರಯೋಜನ ಪಡೆಯುವಂತೆ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಡಾ.ಎಫ್ ಟಿ.ಹಳ್ಳಿಕೇರಿ, ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ, ಕೇಂದ್ರದ ಸಂಚಾಲಕ ಶ್ರೀರಾಮ ಹಾಗೂ ಜನನಿ ವಿವಿದ್ದೋದ್ದೇಶ ಸಹಕಾರಿಯ ಹಾಗೂ ಕೇಂದ್ರದ ಉಸ್ತುವಾರಿ ಅನಂತ ಜೋಶಿ ಪ್ರಕಟನೆಯಲ್ಲಿ ಕೋರಿದ್ದಾರೆ.
One attachment • Scanned by Gmail