ನಾಳೆ ಪ್ರಶಸ್ತಿ ಪ್ರದಾನ ಭೂಮಿಕಾ-22


ಹುಬ್ಬಳ್ಳಿ, ಜು 15: ಜಿಬಿಎಸ್ ಪದವಿ ಮತ್ತು ಪ್ರಶಸ್ತಿ ಪ್ರಧಾನ ಭೂಮಿಕಾ-22 ಕಾರ್ಯಕ್ರಮವನ್ನು ಇದೇ ದಿ. 16 ರಂದು ಸಂಜೆ 5ಕ್ಕೆ ನಗರದ ಅಮರಗೋಳದ ರಾಯಲ್ ರಿಟ್ಜ್ ರೆಸಾರ್ಟ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ತೇಜಸ್ ವ್ಯಾಸ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022ನ್ನು ಜಿಇಎಲ್ ಸೊಸೈಟಿಯ ಅಧ್ಯಕ್ಷ ರಮೇಶ ಕೊಠಾರಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಂ.ಎಸ್. ಸುಭಾಸ್ ಹಾಗೂ ಜಿಸಿ ಸದಸ್ಯರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮವು ವಿದ್ಯಾರ್ಥಿ ಸಾಧಕರ ವೈಭವವನ್ನು ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಪೆÇೀಷಕರು ಹಾಗೂ ಜಿಬಿಎಸ್ ಗೆ ಇದು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳ ಕೋರ್ಸ್ ಮುಗಿದ ನಂತರ ಸ್ಥಳವಾಕಾಶ ಇರುವಲ್ಲಿ ಉದ್ಯೋಗವಕಾಶ ನೀಡುವುದು. ಅಲ್ಲದೇ ಸಮತೋಲಿನ ಸ್ಕೋರ್ ಕಾರ್ಡ್ ಮತ್ತು ಮೌಲ್ಯವರ್ಧಿತ ಕೋರ್ಸ್‍ಗಳ ಪ್ರಮಾಣ ಪತ್ರಗಳನ್ನು ನೀಡುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ತಜೀಂತಾಜ್ ಮಹತ್ ಇತರರಿದ್ದರು.