
ರಾಯಚೂರು,ಜು.೨೯-
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ ಜುಲೈ ೩೦ ರಂದು ನಗರದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪ ಜವಹಾರ್ ನಗರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಾ ಪುರಸ್ಕಾರ,ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರದಾನ ಸಚಲಕ ಡಿ.ಕೆ ಮರುಳಿಧರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಹಿಸಿಕೊಳ್ಳಲಿದ್ದು, ಖ್ಯಾತ ಆದ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ , ಸಚಿವರಾದ ಎನ್.ಎಸ್. ಬೋಸರಾಜು, ಸಂಸದರಾದ ರಾಜಾಅಮರೇಶ್ವರ್ ನಾಯಕ್, ಶಾಸಕರುಗಳಾದ ಡಾ.ಶಿವರಾಜ್ ಪಾಟೀಲ್ , ಬಸವನಗೌಡ ದದ್ದಲ್ ಸಮಾಜದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ,, ಉಪಾಧ್ಯಕ್ಷರಾದ ಆನಂದ ಫಡ್ನೀಸ್, ಶುಭಮಂಗಳ ಸುನೀಲ್ ಅವರು ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್ .ಸಿ ಯಲ್ಲಿ ಅಧಿಕ ಅಂಕ ಪಡೆದ ಸಮಾಜದ ೧೦೦ ಕ್ಕೂ ಸಮಾಜರ ವಿದ್ಯಾರ್ಥಿಗಳಿಗೆ ಸನ್ಮಾನ , ಆರ್ಥಿಕವಾಗಿ ಹಿಂದುಳಿದ ಸಮಾಜದ ೧೫ ವಿದ್ಯಾರ್ಥಿಗಳಿಗೆ ೧೦ ಸಾವಿರ ವಿದ್ಯಾನಿಧಿ ವಿತರಣಾ ಹಾಗೂ ಖ್ಯಾತ ವೈದ್ಯರಾದ ಡಾ. ರಾಘವೇಂದ್ರಾಚಾರ್ಯ ವಿ.ಜೋಷಿಯವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನರಸಿಂಗರಾವ್ ದೇಶಪಾಂಡೆ, ಆನಂದ್ ತೀರ್ಥ ಫಡ್ನೀಸ್ , ವೇಣುಗೋಪಾಲ್ ಇನಾಂದರ್, ಹನುಮೇಶ್ ರಾವ್ ಸರಾಫ್ ಸೇರಿದಂತೆ ಇತರರು ಇದ್ದರು.