ನಾಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ

ದಾವಣಗೆರೆ. ಸೆ.೨೩: ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ವಾಲ್ಮೀಕಿ ನಾಯಕ ( ಎಸ್‌ಟಿ ) ಸಮುದಾಯದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಗಣ್ಯರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಸಿ. ಶ್ರೀನಿವಾಸ್ ಮೂರ್ತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 24 ರ ಶನಿವಾರ ಬೆಳಗ್ಗೆ 10.30 ಕ್ಕೆ ಸಮಾರಂಭವನ್ನು ಏರ್ಪಡಿಲಾಗಿದೆ  ಎಂದರು.ಸಮಾರಂಭದ ಉದ್ಘಾಟನೆಯನ್ನು ಜಗಳೂರು ಶಾಸಕರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ  ಎಸ್.ವಿ. ರಾಮಚಂದ್ರಪ್ಪ  ನೆರವೇರಿಸುವರು . ಬಳ್ಳಾರಿ ಲೋಕಸಭಾ ಸದಸ್ಯ  ವೈ . ದೇವೇಂದ್ರಪ್ಪ ಉಪಸ್ಥಿತರಿರುವರು. ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು . ಸಮಾರಂಭದ ಮುಖ್ಯ ಅತಿಥಿಗಳಾಗಿ , ಜಗಳೂರು ಮಾಜಿ ಶಾಸಕ ಎಚ್.ಪಿ. ರಾಜೇಶ್ ಸೇರಿದಂತೆ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರುಗಳು , ಗಣ್ಯಮಹೋದಯರು , ಸಮುದಾಯದ ವಿವಿಧ ಸಂಘಟನೆಗಳು , ಅಧ್ಯಕ್ಷರುಗಳು , ಪದಾಧಿಕಾರಿಗಳು , ಯುವ ಮುಖಂಡರುಗಳು , ಜನಪ್ರತಿನಿಧಿಗಳು , ಪಾಲಿಕೆ ಸದಸ್ಯರುಗಳು , ಹೋರಾಟಗಾರರು , ಸಾಹಿತಿಗಳು , ಚಿಂತಕರುಗಳು ಭಾಗವಹಿಸುವರು  ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸುರೇಶ್, ನಿರಂಜನ್ ಉಪಸ್ಥಿತರಿದ್ದರು.