ನಾಳೆ ಪುನೀತ್ ರಾಜ್ ಕುಮಾರ್‍ಗೆ ನುಡಿನಮನ

ಮೈಸೂರು, ನ.12 :- ನಟ, ದಿ. ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ಡಾ. ರಾಜ್ ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ,ಅಮರ ಜೀವಿ ನಮ್ಮ ರಾಜ ಕುಮಾರ’ ಎಂಬ ಶೀರ್ಷೀಕೆಯಡಿ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ರಾಜ್ ಕುಮಾರ್ ಮ್ಯೂಸಿಕಲ್ ಗ್ರೂಪ್'ನ ಬಿ.ಎಸ್.ಜಯರಾಮರಾಜು ಮಾತನಾಡಿ, ನ.13ರಂದುರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರ’ದಲ್ಲಿ ಯುವರತ್ನ ಪುನೀತ್ ರಾಜ ಕುಮಾರ್' ಅವರ ಸ್ಮರಣಾರ್ಥವಾಗಿ,ಅಮರ ಜೀವಿ ನಮ್ಮ ರಾಜ ಕುಮಾರ’ ಎಂಬ ಶೀರ್ಷೀಕೆಯಡಿ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಪ್ಪು ಅವರು ಸಮಾಜಕ್ಕೆ ಉತ್ತಮ ಆದರ್ಶವ್ಯಕ್ತಿಯಾಗಿ 46 ನೇ ವಯಸ್ಸಿಗೆ ಮೀರಿದ ಸಾಧನೆ ಮಾಡಿ ಕೋಟ್ಯಾಂತರ ಜನರ ಮನಸಲ್ಲಿ ನೆಲೆ ಕಂಡಿದ್ದಾರೆ. ನಮ್ಮನ್ನು ಅಗಲಿದ ಅಪ್ಪು ಸೂರ್ಯಚಂದ್ರರಿರುವ ವರೆಗೆ ಅಮರರಾಗಿಯೇ ಇರುತ್ತಾರೆ ಎಂದರು.
ಅಪ್ಪುರವರಿಗೆ ನುಡಿನಮನದ ಜೊತೆಗೆ ಕೆಲವು ಸಂದರ್ಭಕ್ಕೆ ಅನುಗುಣವಾಗಿ ಗೀತೆಗಳನ್ನು ಸಹ ಗಾಯಕರು ಹಾಡಲಿದ್ದಾರೆ. ನುಡಿನಮನದಲ್ಲಿ ನಗರದ ಹಿರಿಯರು, ಗಣ್ಯರು, ಸಾಹಿತಿಗಳು, ಕವಿಗಳು, ಸಮಾಜಸೇವಕರು ಅಪ್ಪು ಕುರಿತು ಮಾತನಾಡಲಿದ್ದಾರೆ. ಗಣ್ಯರು ಅಂದು ಸಂಜೆ 6.30ಕ್ಕೆ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವ ಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಸುಕುಮಾರ್, ಮಲ್ಲೇಶ್, ಸುಚೇಂದ್ರ, ನಾಗಶ್ರೀ, ಲತಾ, ಬಾಲಕೃಷ್ಣ ಉಪಸ್ಥಿತರಿದ್ದರು .