ನಾಳೆ ಪುನೀತ್‌ರವರಿಗೆ ಶ್ರದ್ಧಾಂಜಲಿ ನುಡಿನಮನ -ಎಮ್‌ಎಸ್ ಶ್ರೀನಿವಾಸ

ಸಿಂಧನೂರು.ನ.೬-ಚಲನಚಿತ್ರ ನಟ ದಿ. ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಮಾಡುವ ಮೂಲಕ ನುಡಿನಮನ ಕಾರ್ಯಕ್ರಮವನ್ನು ನಾಳೆ ೭ರಂದು ರವಿವಾರ ಬೆಳಗ್ಗೆ ೧೧ಗಂಟೆ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ತಾಲೂಕಾಧ್ಯಕ್ಷರಾದ ಎಮ್‌ಎಸ್ ಶ್ರೀನಿವಾಸ ಗೌಡ ತಿಳಿಸಿದರು.
ನಗರದ ಮಾಜಿ ಶಾಸಕ ಆರ್. ನಾರಾಯಣಪ್ಪನವರ ಪುತ್ರ ಆರ್. ರಾಜಶೇಖರ ವಕೀಲರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.
ಆರ್ಯ ಈಡಿಗ ಸಮಾಜದಿಂದ ಪುನೀತ್ ರಾಜಕುಮರಗೆ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ-ಸಂಸ್ಥೆಗಳ ಮುಖಂಡರಗಳು, ಕಸಾಪ ಸದಸ್ಯರನ್ನು ಆಹ್ವಾನಿಸಿದ್ದು ಎಲ್ಲರು ಕಾರ್ಯಕ್ರಮಕ್ಕೆ ಆಗಮಿಸಿ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆರ್ಯ ಈಡಿಗ ಸಮಾಜ ಮುಖಂಡ ಆರ್. ರಾಜಶೇಖರ ವಕೀಲರು ತಿಳಿಸಿದರು.
ಆರ್ಯ ಈಡಿಗ ಸಮಾಜ ಮುಖಂಡರಾದ ಆರ್. ಶ್ರೀಧರ, ಹುಲಗಯ್ಯ ಎಲ್‌ಐಸಿ, ಎಮ್. ಗಂಗಾಧರ, ಆರ್‌ಎನ್ ಸುರೇಂದ್ರ, ಉಪನ್ಯಾಸಕ ಶಿವರಾಜ, ರಾಮಕೃಷ್ಣ ದೇವಿ ಕ್ಯಾಂಪ್, ಮಂಜುನಾಥ ಕಲಾಲ್, ಎಮ್‌ವಿ ರಾಜಶೇಖರ ಸೇರಿದಂತೆ ಅನೇಕರು ಇದ್ದರು.