ನಾಳೆ ಪಾಲಿಕೆ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ ಕಣದಲ್ಲಿ 187 ಅಭ್ಯರ್ಥಿಗಳು

 • ಎಲ್ಲಾ ವಾರ್ಡ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಸ್ಪರ್ಧೆ
 • 2 ನೇ ವಾರ್ಡಿನಲ್ಲಿ ನೇರ ಹಣಾಹಣಿ
 • 5 ವಾರ್ಡಿನಲ್ಲಿ ಮಾತ್ರ ಜೆಡಿಎಸ್
 • ಪಕ್ಷೇತರರು 65 ಜನ
  (ಸಂಜೆವಾಣಿ ಪ್ರತಿನಿಧಿಯಿಂದ)
  ಬಳ್ಳಾರಿ, ಏ.26: ಇಲ್ಲಿನ ಮಹಾನಗರ ಪಾಲಿಕೆಯ 39 ವಾರ್ಡುಗಳ ಸದಸ್ಯ ಸ್ಥಾನಕ್ಕೆ ನಾಳೆ ಎ 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿದೆ.
  ಮತದಾನಕ್ಕಾಗಿ 333 ಮೂಲ ಮತಗಟ್ಟೆಗಳು ಹಾಗೂ 11 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 344 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎ.30 ರಂದು ಮತಗಳ ಎಣಿಕೆ ನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಮತಗಟ್ಟೆಗಳಿಗೆ ಮತಯಂತ್ರಗಳು ಸೇರಿಂದತೆ ಇನ್ನಿತರ ಸಮಾಗ್ರಿಗಳನ್ನು ತೆಗೆದುಕೊಂಡು ಮತಗಟ್ಟೆ ಸಿಬ್ಬಂದಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ತಮ್ಮ ಮತಗಟ್ಟೆಗಳಿಗೆ ತೆರಳಿದ್ದಾರೆ.
  ಮತದಾನ ಪ್ರಕ್ರಿಯೆಗೆ 1376 ಸಿಬ್ಬಂದಿಗಳನ್ನು ನಿಯೋಜಿಸಿ ಅಗತ್ಯ ತರಬೇತಿ ನೀಡಿದೆ. 400 ಬ್ಯಾಲೆಟ್ ಯೂನಿಟ್ ಮತ್ತು 400 ಕಂಟ್ರೋಲ್ ಯೂನಿಟ್ ಸೇರಿದಂತೆ ಒಟ್ಟು 800 ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ 1,66,298 ಪುರುಷ ಮತದಾರರು ಹಾಗೂ 1,74,538 ಮಹಿಳಾ ಮತದಾರರು ಮತ್ತು 36 ಜನ ಇತರೆ ಮತದಾರರು ಸೇರಿದಂತೆ ಒಟ್ಟು 3 ಲಕ್ಷದ 40 ಸಾವಿರದ 882 ಜನ ಮತದಾರರಿದ್ದಾರೆ
  ಕಳೆದ ಬಾರಿ ಚುನಾವಣೆಯಲ್ಲಿ 35 ವಾರ್ಡುಗಳಿದ್ದವು, ಈ ಬಾರಿ ವಾರ್ಡುಗಳ ವಿಂಗಡಣೆ ಮಾಡಿ 39 ಕ್ಕೆ ಹೆಚ್ಚಿಸಲಾಗಿದೆ. ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿಯನ್ನು ಮೂರು ಲಕ್ಷಕ್ಕೆ ನಿಗಧಿ ಮಾಡಿದೆ.
  ಇನ್ನು ಪೊಲೀಸ್ ಇಲಾಖೆ ಜಿಲ್ಲೆಯ ಸಿಬ್ಬಂದಿಯನ್ನೇ ಬಳಸಿಕೊಂಡಿದೆ. ಮತದಾರರಿಗೆ ಜಾಗೃತಿ ಮೂಡಿಸಲು ನಿನ್ನೆ ನಗರದಲ್ಲಿ ಜಾತಾವನ್ನು ನಡೆಸಿತು. ನಗರದ 17,18,32,39, ಸೇರಿಂದತೆ ಕೆಲ ವಾರ್ಡುಗಳು ಸೂಕ್ಷ್ಮತೆಯಿಂದ ಕೂಡಿದ್ದು ಇಲ್ಲಿ ಹೆಚ್ಚಿನ ಬಂದೋಬಸ್ತು ಒದಗಿಸುವ ಅವಶ್ಯಕತೆ ಇದೆ.
  ಕೋವಿಡ್ ಪಾಸಿಟಿವ್
  ;ಚುನಾವಣಾ ಕಾರ್ಯಕ್ಕೆ ತೆರಳುವ ಮುನ್ನ ಸಿಬ್ಬಂದಿಯ ರ್ಯಾಪಿಡ್ ಟೆಸ್ಟ್ ಮಾಡಿದರೆ 14 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ
  ಇದರಿಂದಾಗಿ
  ಪ್ರತಿ ಮತಗಟ್ಟೆಗೂ 20 ಮಾಸ್ಕ್,6 ಸಣ್ಣ ಸ್ಯಾನಿಟೈಸರ್ ಬಾಟಲ್,ಮತದಾರರಿಗೂ ಸ್ಯಾನಿಟೈಸರ್ ಬಾಟಲ್, 6 ಫೆಸ್‍ಶಿಲ್ಡ್ ಹಾಗೂ 6 ಜೊತೆ ಗ್ಲೋಸ್‍ಗಳನ್ನು ಮಸ್ಟರಿಂಗ್ ಆಗಮಿಸಿದ ಚುನಾವಣಾ ಸಿಬ್ಬಂದಿಗೆ ನೀಡಿದೆ.
  ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಗೆ ಚುನಾವಣಾ ಕಿಟ್ ಜೊತೆಗೆ ಕೋವಿಡ್-19ರ ನಿಯಂತ್ರಣ ಕಿಟ್ (ಹ್ಯಾಂಡ್ ಸ್ಯಾನಿಟೇಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್‍ಶೀಲ್ಡ್) ಸಹ ವಿತರಿಸಲಾಗಿದೆ. ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನು ಪ್ರತಿದಿನ ಮೂರು ಬಾರಿ ಸ್ಯಾನಿಟೇಸ್ ಮಾಡಲಾಗುತ್ತಿದೆ.
  ಸಿಬ್ಬಂದಿಯವರು ಮತಗಟ್ಟೆ ಕೇಂದ್ರಗಳಿಗೆ ತೆರಳುವ ಎಲ್ಲಾ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳ ಹೊರ ಮತ್ತು ಒಳ ಹೋಗುವ ದ್ವಾರಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸಿಂಗ್ ಹಾಗೂ ಟ್ರಿಪಲ್‍ಲೆಯರ್ ಮಾಸ್ಕ್ ವಿತರಿಸಿ ಥರ್ಮಲ್‍ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮಿಟರ್‍ನಿಂದ ತಪಾಸಣೆ ಮಾಡುವುದರ ಜೊತೆಗೆ ರೋಗಲಕ್ಷಣಗಳು ಕಂಡು ಬಂದ ಸಿಬ್ಬಂದಿಗೆ ಆವರಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ.
  ಆಯ್ದಾ 20 ಸ್ಥಳಗಳಲ್ಲಿ ಕೈತೊಳೆದುಕೊಳ್ಳಲು ಲಿಕ್ವಿಡ್‍ಸೋಪ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ
  :
  ಕರೋನಾ ಸಂಕಷ್ಟದಲ್ಲಿ
  ನೆರವಾದ ಚುನಾವಣೆ

  ನಗರದಲ್ಲಿ ನಡೆಯುತ್ತಿರುವ ಪಾಲಿಕೆ ಸದಸ್ಯರ ಚುನಾವಣೆ ಈ ಕರೋನಾ ಸಂಕಷ್ಟದಲ್ಲಿ ಜನತೆಗೆ ಒಂದಿಷ್ಟು ನೆರವಾಗಿದೆ ಎಂದರೆ ತಪ್ಪಾಗಲಾರದು. ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಓಟಿಗಾಗಿ ನೋಟು ಹಂಚಿರುವ ವಿಷಯ ಓಪನ್ ಸೀಕ್ರೇಟ್ ಆಗಿದೆ. ಕರೋನಾ ಸಂಕಷ್ಟ ಎಂದೋ ಏನೋ ಚುನಾವಣಾಧಿಕಾರಿಗಳು ಮಾತ್ರ ಹಗಲು ವೇಳೇಯಲ್ಲೇ ಮನೆ, ಮನೆಗೆ ತೆರಳಿ ಹಣ ಹಂಚುತ್ತಿದ್ದರೂ ತಡೆಯುವ ಒಂದು ಪ್ರಯತ್ನವೂ ನಡೆದಿಲ್ಲ.
  ನಗರದ ಏಳು ಸೇರಿಂತೆ ಕೆಲ ವಾರ್ಡುಗಳನ್ನು ಬಿಟ್ಟರೆ ಬಹುತೇಖ ಎಲ್ಲಾ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ತಲಾ ಓಟಿಗೆ ಸಾವಿರದಂತೆ ಹಂಚಿರುವುದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಪ್ರತಿಷ್ಟಿತ ವಾರ್ಡುಗಳಲ್ಲಿ, ಮನೆಗೊಂದು 25 ಕಿಲೋ ಅಕ್ಕಿ, ಕುಕ್ಕರ್, ಜೊತೆಗೆ ಬೆಳ್ಳಿ ನಾಣ್ಯವನ್ನೂ ಹಂಚಲಾಗಿದೆಯಂತೆ.
  ಇನ್ನು ಕಾಂಗ್ರೆಸ್‍ನವರು 200 ರಿಂದ ಹೆಚ್ಚಿನ ಕಡೆ ಒಂದು ಸಾವಿರದಂತೆ ಹಂಚಿರುವ ಬಗ್ಗೆ ಮಾಹಿತಿ ಇದೆ. ಇಲ್ಲಿಯೂ ಪ್ರತಿಷ್ಠಿತ ವಾರ್ಡುಗಳಲ್ಲಿ ತಲಾ 2 ಸಾವಿರ ರೂಗಳನ್ನು ನೀಡಿದ್ದಾರಂತೆ. ಹಣಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮುಂದಿದೆ ಎನ್ನಲಾಗುತ್ತಿದೆ.
  ಕೆಲ ವಾರ್ಡುಗಳಲ್ಲಿ ನಾವೇನು ಕಮ್ಮಿ ಇಲ್ಲ ಎಂದು ಸ್ವತಂತ್ರ ಅಭ್ಯರ್ಥಿಗಳು ಸಹ 1 ರಿಂದ 2 ಸಾವಿರ ರೂಗಳನ್ನು ಹಂಚಿದ್ದಾರೆ.
  ಹಾಗಂತ ಎಲ್ಲಾ ಮತದಾರರೂ ಹಣ ತೆಗೆದುಕೊಂಡಿಲ್ಲ. ಅನೇಕ ಕಡೆಗಳಲ್ಲಿ ನಮಗೆ ಈ ಪಾಪಿ ಹಣ ಬೇಡ ಎಂದವರೂ ಇದ್ದಾರೆ. ಆದರೆ ಶೇ 90 ಕ್ಕೂ ಹೆಚ್ಚು ಜನರು ಮತದಾರ ಮಾತ್ರ ಹಣ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಲು ಮಾತ್ರ ಮುಂದಾಗುತ್ತಿಲ್ಲ. ಇದಕ್ಕೆ ಮೌನಂ ಸಮ್ಮತಿ ಲಕ್ಷಣಂ ಎನ್ನವಂತಿದೆ.