ನಾಳೆ ಪವಿತ್ರ ರಂಝಾನ್ ಮಹತ್ವದ ಕುರಿತು ಪರಿಚಯ

ಕಲಬುರಗಿ, ಮಾ.18- ನಗರದ ಸಂಗತ್ರಾಸವಾಡಿ ಹಿದಾಯತ್ ಸೆಂಟರ್ ನಲ್ಲಿ ನಾಳೆ ಮಾ.19ರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾದ ಜಮಾಅತೆ ಇಸ್ಲಾಮೀ ಹಿಂದ್ ನ ಸಂಘರ್ಷದ 75 ವರ್ಷಗಳು ಹಾಗೂ ರಮಝಾನ್ ತಿಂಗಳ ಪರಿಚಯ ಕಾರ್ಯಕ್ರಮ ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮತ್ತು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಆಗಮಿಸಲಿದ್ದು, ಜಮಾಆತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರಾದ ಮುಹಮ್ಮದ್ ಝಿಯಾ ಉಲ್ಲಾಹ ಅಧ್ಯಕ್ಷತೆ ವಹಿಸುವರು.
ಪವಿತ್ರ ರಂಝಾನ್ ತಿಂಗಳ ಮಹತ್ವದ ಕುರಿತು ಜಮಾಆತೆ ಇಸ್ಲಾಮಿ ಹಿಂದ್‍ನ ಹಿರಿಯ ಸದಸ್ಯರಾದ ಅಬ್ದುಲ್ ಕಾದರ ಇಂಜನಿಯರ್ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಸಕ್ತರು ಭಾಗವಹಿಸುವಂತೆ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ಯಕ್ಷ ಸೈಯದ ತನ್ವೀರ ಹಾಷ್ಮೀ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.