ನಾಳೆ ಪದಗ್ರಹಣ


ಹುಬ್ಬಳ್ಳಿ,ಮಾ.18: ಜೈಂಟ್ಸ್ ವೆಲ್ ಫೇರ್ ಫೌಂಡೇಶನ್ ಇವರ ಅಂಗ ಸಂಸ್ಥೆಯಾದ ಜೈಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಶಹರ ಇದರ ಸಹಯೋಗದಲ್ಲಿ 2023 ನೇ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಾಳೆ ಸಂಜೆ 6.30 ಕ್ಕರ ನಗರದ ಸ್ವರ್ಣಾ ಪ್ಯಾರಾಡೈಸ್ ಮಂಥನ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಶಹರದ ಮಾಜಿ ಅಧ್ಯಕ್ಷರಾದ ವಾಸುದೇವ ಮಹಾಲೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನೂತನ ಅಧ್ಯಕ್ಷರಾಗಿ ನಿವೃತ್ತ ಆಹಾರ ಇಲಾಖೆ ವ್ಯವಸ್ಥಾಪಕ ಮಹಾದೇವಪ್ಪ ಪಾವಟೆ, ಕಾರ್ಯದರ್ಶಿಯಾಗಿ ಆರ್ಕಿಟಿಕ್ಸ್ ಆಶ್ವಿನಕುಮಾರ್, ಖಜಾಂಚಿಯಾಗಿ ಅಂಬೇಶ ಊಟವಾಲೆ ಮತ್ತು ಉಳಿದ ಸದಸ್ಯ ಪದಾಧಿಕಾರಿಗಳು ಅಧಿಕಾರ ಗ್ರಹಣ ಮಾಡಲಿದ್ದಾರೆ ಎಂದರು.
ಇನ್ನೂ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸ್ವರ್ಣಾ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ.ಪ್ರಸಾದ್, ಅಂಕೋಲಾ ಕೆಎಲ್‍ಇ ಸಂಸ್ಥೆಯ ಮುಖ್ಯಸ್ಥರಾದ ಆರ್.ನಟರಾಜ್, ಮುಂಬೈ ಜೈಂಟ್ಸ್ ವೆಲ್ ಫೇರ್ ಕೇಂದ್ರಿಯ ಸದಸ್ಯರಾದ ದಿನಕರ್ ಅಮೀನ್, ಜಿ.ಎಸ್.ನಾಯ್ಕ್, ತಾರಾದೇವಿ ವಾಲಿ, ಪಾಂಡುರಂಗ ತಾಲೆಬೈಲಕರ್ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಜೈಂಟ್ಸ್ ಗ್ರುಪ್ ಹುಬ್ಬಳ್ಳಿ ನೂತನ ಅಧ್ಯಕ್ಷ ಮಹಾದೇವಪ್ಪ ಪಾವಟೆ, ಖಜಾಂಚಿ ಅಂಬೇಶ ಊಟವಾಲೆ, ಕಾರ್ಯದರ್ಶಿ ಅಶ್ವಿನಕುಮಾರ್ ಉಪ್ಪಿನಬೈಲ್, ಜಿ.ಎಸ್.ನಾಯ್ಕ ಉಪಸ್ಥಿತರಿದ್ದರು.