ನಾಳೆ ಪತ್ರಿಕಾ ದಿನಾಚರಣೆ: ಬಾಬು ಅಲಿ

ದೇವದುರ್ಗ.ಜು.೩೦- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಜುಲೈ ೩೧ ರ ಭಾನುವಾರದಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಬಾಬು ಅಲಿ ಕರಿಗುಡ್ಡ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ಸುಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಾರಂಭವನ್ನು ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಬು ಅಲಿ ಕರಿಗುಡ್ಡ ವಹಿಸಲಿದ್ದಾರೆ. ಸನ್ಮಾನ ಮತ್ತು ಪ್ರಶಸ್ತಿಯನ್ನು ಕ್ಷೇತ್ರದ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರಾದ ಬಿ.ವಿ.ನಾಯಕ, ವಿಧಾನ ಪರಿಷತ್ತು ಸದಸ್ಯರಾದ ಶರಣಗೌಡ ಬಯ್ಯಾಪೂರ, ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್ ಜೇರಬಂಡಿ, ಉಪಾಧ್ಯಕ್ಷ ಕೆಂಚಣ್ಣ ಪೂಜಾರಿ, ಜೆಡಿಎಸ್ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ ನಾಯಕ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಆರ್.ಗುರುನಾಥ, ಅತಿಥಿಗಳಾಗಿ ಜಿ.ಪಂ.ಇಂಜನಿಯರಿಂಗ ವಿಭಾಗ ಕಾರ್ಯಪಾಲಕ ಅಭಿಯಂತರರಾದ ವೆಂಕಟೇಶ ಗಲಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವೆಂಕಟಪ್ಪ, ಹಿರಿಯ ವರದಿಗಾರ ಬಿ.ವೆಂಕಟಸಿಂಗ್, ತಹಶೀಲ್ದಾರರಾದ ಶ್ರೀನಿವಾಸ ಚಾಪಲ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದೇಬರಾಜ ಬಿಂಗಂ, ಉದ್ಯಮಿ ಭಾನುಪ್ರಕಾಶ ಖೇಣೇದ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ, ಕಸಾಪ ತಾಲೂಕಧ್ಯಕ್ಷ ಮರಿಲಿಂಗಪ್ಪ ಕೋಳೂರು, ಸಂಘದ ಜಿಲ್ಲಾ ಕಾರ್ಯದರ್ಶಿ ಸೂಗೂರೇಶ ಗುಡಿ, ಸಮಿತಿ ಸದಸ್ಯ ಅಲಿಬಾಬಾ ಪಟೇಲ್ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಸರಳ ಸಜ್ಜನಿಕೆಯ ರಾಜಕಾರಣಿ ಎ.ವೆಂಕಟೇಶ ನಾಯಕ ಸ್ಮರಣಾರ್ಥ ಬಿ.ವಿ.ನಾಯಕ ಪ್ರಾಯೋಜಿತ ದುರ್ಗದ ಸಿರಿ ಪ್ರಶಸ್ತಿಯನ್ನು ಪತ್ರಕರ್ತರಾದ ರವಿಕುಮಾರ ಪಾಟೀಲ್ ಅಳ್ಳುಂಡಿ, ಬಸವರಾಜ ಬ್ಯಾಗವಾಟ, ಮಾರ್ಕಂಡೇಯ ನಾಡದಾಳ, ಬೂದೆಯ್ಯ ಸ್ವಾಮಿ ಇಂಗಳದಾಳ, ರಘುನಾಥ ಸಿಂಗ್ ಸ್ಮರಣಾರ್ಥ ಬಿ.ವೆಂಕಟಸಿಂಗ್ ಪ್ರಾಯೋಜಿತ ಕೋಟೆ ನಾಡು ಪ್ರಶಸ್ತಿಗೆ ಮಹಾಲಿಂಗ ದೊಡ್ಡಮನಿ, ತಿಪ್ಪಣ್ಣ ಬಲ್ಲಿದವ ಸ್ಮರಣಾರ್ಥ ವಿಶ್ವನಾಥ ಬಲ್ಲಿದವ ಪ್ರಾಯೋಜಿತ ಶ್ರೀಗಂಧದ ಸಿರಿ ಪ್ರಶಸ್ತಿಯನ್ನು ಬಂದೇನವಾಜ್ ನಾಗಡದಿನ್ನಿ ಮತ್ತು ವಿರೂಪಾಕ್ಷಿ ಮರಕಂದಿನ್ನಿ ಅವರು ಭಾಜನರಾಗಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ಬಾಬು ಅಲಿ ಕರಿಗುಡ್ಡ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ಸುಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.