ನಾಳೆ ನೂತನ ದೇವಾಲಯ ಲೋಕಾರ್ಪಣೆ

ಹಿರಿಯೂರು ಏ. 21; ತಾಲೂಕಿನ ಶ್ರೀ ಕ್ಷೇತ್ರ ಯಲ್ಲದಕೆರೆ ಏಳು ಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಮಾತಂಗಮ್ಮ ದೇವಿಯರ ನೂತನ ದೇವಾಲಯ ಪ್ರವೇಶ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 22ರ ಶನಿವಾರ ಶ್ರೀ ದಶರಥ ರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿ ಗಂಗಾ ಪೂಜೆ ಸಹಸ್ರನಾಮರ್ಚನೆ ಇರುತ್ತದೆ. ಸಂಜೆ 7 ಗಂಟೆಗೆ ಗೆ ಶ್ರೀ ಕರಿಯಮ್ಮ ದೇವಿಯವರ ಸ್ವಾಗತದೊಂದಿಗೆ ಕಂಚಿಪುರದ ಶ್ರೀ ಕಂಚಿ ವರದರಾಜ ಸ್ವಾಮಿ, ಗುಡ್ಡದ ನೇರಲಕೆರೆಯ ಶ್ರೀ ಕೋಡಿ ಕರಿಯಮ್ಮ ದೇವಿ, ಅರಿಶಿನ ಗುಂಡಿಯ ಶ್ರೀ ಕಣಿವೆ ಮಾರಮ್ಮ ದೇವಿ, ಶೇಷಪ್ಪನಹಳ್ಳಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶಿಡ್ಲಕಟ್ಟೆಯ ಶ್ರೀ ಕರಿಯಮ್ಮ ದೇವಿ, ಹಾಲು ಮಾದೇನಹಳ್ಳಿಯ ಶ್ರೀ ಉಳವಿನಾಳ್ ಕರಿಯಮ್ಮ ದೇವಿ. ಬಡ ಗೊಲ್ಲರಹಟ್ಟಿಯ ಶ್ರೀ ಈರಣ್ಣ ಸ್ವಾಮಿ, ಹಂದಿಗನಡು  ಶ್ರೀ ಭೂತೇಶ್ವರ ಸ್ವಾಮಿ, ಯಲ್ಲದಕೆರೆಯ ಶ್ರೀ ಸಿದ್ದರಾಮೇಶ್ವರ ಸ್ವಾಮಿ ದೇವರುಗಳ ಕೂಡು ಭೇಟಿ ಇರುತ್ತದೆ. ನಂತರ ಹೋಮ ಅಭಿಷೇಕ ಮತ್ತು ಮಹಾಮಂಗಳಾರತಿ ಇರುತ್ತದೆ 23ರ ಭಾನುವಾರ ಬೆಳಗಿನ ಜಾವ 101 ಲಿಂಗೇಶ್ವರ ದಿವ್ಯ ಕ್ಷೇತ್ರದಲ್ಲಿ ಎಲ್ಲ ದೇವರುಗಳ ಗಂಗಾ ಪೂಜೆ   ಹಾಗೂ ಮೂಲ ದೇವರ ಕಳಸ ಪೂಜೆ  ಇರುತ್ತದೆ ಬೆಳಗ್ಗೆ 7:30ಕ್ಕೆ ಅಮ್ಮನವರ ವಿಜೃಂಭಣೆಯ ಅಂಬಾರಿ ಉತ್ಸವ ಇರುತ್ತದೆ ನಂತರ ಕಳಸ ಪ್ರತಿಷ್ಠಾಪನ ಮಹೋತ್ಸವ ನೂತನ ದೇವಾಲಯಗಳ ಪ್ರವೇಶ ಪೂರ್ಣಾಹುತಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಎರಡೂ ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಕರಿಯಮ್ಮ ದೇವಿ  ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.