ನಾಳೆ ನಿಗದಿತ ಸ್ಥಳಗಳಲ್ಲಿ ಮತ ಎಣಿಕೆ

ಧಾರವಾಡ, ಡಿ.29- ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ಎರಡು ಹಂತದಲ್ಲಿ ಜರುಗಿದ ಗ್ರಾಮ ಪಂಚಾಯತ ಚುನಾವಣೆಗಳ ಮತ ಏಣಿಕೆ ಕಾರ್ಯವು ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಾನದಲ್ಲಿ ನಿಗದಿ ಪಡಿಸಿರುವ ಸ್ಥಳಗಳಲ್ಲಿ ನಡೆಯಲಿದ್ದು, 7 ತಾಲೂಕಿನ ಮತ ಏಣಿಕಾ ಕೇಂದ್ರಗಳಲ್ಲಿ 744 ಸಿಬ್ಬಂದಿಗಳು ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಮುಕ್ತಾಯವಾಗುವವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಮತ ಏಣಿಕೆಗಾಗಿ 7 ಮತ ಏಣಿಕೆ ಕೇಂದ್ರಗಳನ್ನು ಗುರುತಿಸಲಾಗಿದ್ದು 248 ಕೌಂಟಿಂಗ್ ಸುಪರವೈಸರ್ ಮತ್ತು 496 ಕೌಂಟಿಂಗ್ ಸಹಾಯಕರನ್ನು ಮತ ಏಣಿಕೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ.
ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಧಾರವಾಡ ನಗರದ ಬಾಸೆಲ್ ಮಿಷನ್ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದ್ದು, 68 ಜನ ಕೌಂಟಿಂಗ್ ಸುಪರವೈಸರ್ ಮತ್ತು 136 ಕೌಂಟಿಂಗ್ ಸಹಾಯಕರನ್ನು ಈ ಕಾರ್ಯಕ್ಕಾಗಿ ನೇಮಿಸಲಾಗಿದೆ.
ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಅಳ್ನಾವರ ಪಟ್ಟಣದ ಕಾಶೆನಟ್ಟಿ ರಸ್ತೆಯ ಜ್ಯೋತಿ ನಗರದಲ್ಲಿ ಬರುವ ಸೆಂಟ್ ಥೆರೆಸಾ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಥೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, 7 ಜನ ಕೌಂಟಿಂಗ್ ಸುಪರವೈಸರ್ ಮತ್ತು 14 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಹುಬ್ಬಳ್ಳಿಯ ಲ್ಯಾಮಿಂಗಟನ್ ಸ್ಕೂಲ್‍ನಲ್ಲಿ ನಡೆಯಲಿದ್ದು, 46 ಜನ ಕೌಂಟಿಂಗ್ ಸುಪರವೈಸರ್ ಮತ್ತು 92 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಕಲಘಟಗಿ ಪಟ್ಟಣದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, 46 ಜನ ಕೌಂಟಿಂಗ್ ಸುಪರವೈಸರ್ ಮತ್ತು 92 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲ್ಲಿದ್ದು, 43 ಜನ ಕೌಂಟಿಂಗ್ ಸುಪರವೈಸರ್ ಮತ್ತು 86 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ನವಲಗುಂದ ತಾಲೂಕಿನ 14 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ನವಲಗುಂದ ಪಟ್ಟಣದ ಮಾಡೆಲ್ ಎಜುಕೇಶನ್ ಬೋರ್ಡ ಬಾಲಕೀಯರ ಪ್ರೌಢ ಶಾಲೆಯಲ್ಲಿ ನಡೆಯಲಿದ್ದು, 25 ಜನ ಕೌಂಟಿಂಗ್ ಸುಪರವೈಸರ್ ಮತ್ತು 50 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಅಣ್ಣಿಗೇರಿ ತಾಲೂಕಿನ 8 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಅಣ್ಣಿಗೇರಿ ಪಟ್ಟಣದ ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, 13 ಜನ ಕೌಂಟಿಂಗ್ ಸುಪರವೈಸರ್ ಮತ್ತು 26 ಜನ ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
ಮತ ಏಣಿಕಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಆಯಾ ತಾಲೂಕಿನ ಕೇಂದ್ರ ಸ್ಥಳದಲ್ಲಿ ಇಂದು (ಡಿ.28) ರಂದು ತರಬೇತಿ ನೀಡಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ನೋಡಲ್ ಅಧಿಕಾರಿಗಳು ಮತ ಏಣಿಕಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಪ್ರತಿ ಮತ ಏಣಿಕಾ ಕೇಂದ್ರಕ್ಕೆ ಇಬ್ಬರು ಕೌಂಟಿಂಗ್ ಸುಪರವೈಸರ್ ಮತ್ತು 4 ಜನ ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದ್ದು, ಮತ ಏಣಿಕೆ ಕಾರ್ಯ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಜರುಗಲು ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.