ನಾಳೆ ನಾಡಿದ್ದು ದಿನಸಿ, ಮದ್ಯದಂಗಡಿ ಓಪನ್

ಬಳ್ಳಾರಿ, ಮೇ.30: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿನ ಕೋವಿಡ್ ಸೋಂಕು ಕಡಿಮೆ ಮಾಡಲೆಂದು ಜಿಲ್ಲಾಡಳಿತ ಕಳೆದ ಕಳೆದ ಐದು ದಿನಗಳಿಂದ ಬಂದ್ ಮಾಡಲಾಗಿದ್ದ ದಿನಸಿ, ಬೇಕರಿ, ಮಧ್ಯದಂಗಡಿಗಳು ನಾಳೆ ಮತ್ತು ನಾಡಿದ್ದು ಬೆಳಿಗ್ಗೆ ಆರ ರಿಂದ ಮಧ್ಯಾಹ್ನ 12 ವರೆಗೆ ಓಪನ್ ಆಗಲಿವೆ
ಐದು ದಿನಗಳ ಸಂಪೂರ್ಣ ಲಾಕ್‍ಡೌನ್ ನನ್ನು ಮತ್ತೊಂದು ವಾರ ಮುಂದುವರಿಸಲು ನಿರ್ಧರಿಸಿರುವುದರಿಂದ ಜನತೆ ನಾಲೆ ಮತ್ತು ನಾಡಿದ್ದು ದಿನಸಿ ಸೇರಿಂದತೆ ತಮಗೆ ಅವಶ್ಯವಾದ ದಿನ ನಿತ್ಯ ಬಳಕೆಯ ವಸ್ತುಗಳ ಖರೀದಿಗೆ ಮುಗಿ ಬೀಳುವ ಸಾಧ್ಯತೆ ಇದೆ. ಅಂಗಡಿ ಮಾಲೀಕರು ಕೋವವಿಡ್ ನಿಯಮಗಳನ್ನು ಪಾಲಿಸಿ ವ್ಯಾಪಾರ ಮಾಡಿದರೆ ಒಳಿತು.
ಜಿಲ್ಲೆಯಲ್ಲಿ ಈಗ ಕರೋನ್ ಪ್ರಕರಣಗಳು ಕಡಿಮೆಯಾಗುತ್ತಿದ್ದು ನಿನ್ನೆ ದಿನ ಒಂದಿಷ್ಟು ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೂ ಇನ್ನೂ ಸಾವಿನ ಪ್ರಮಾಣ ಕಡಿಮೆ ಆಗಬೇಕಿದೆ. ಅದಕ್ಕಾಗಿ ಮತ್ತಷ್ಟು ಕಠಣ ನಿರ್ಧಾರ ಜಿಲ್ಲೆಯಲ್ಲಿ ಬೇಕಿದೆ.