ನಾಳೆ ನಾಗೇಂದ್ರ, ಮುನ್ನಾಬಾಯ್


 ನಾಮಪತ್ರ ಸಲ್ಲಿಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,18- ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಾಳೆ ನಾಲ್ಕನೇ ಬಾರಿಗೆ ಶಾಸಕರಾಗಲು ಬಯಸಿ ಡಿಸಿ ಕಚೇರಿ ಆವರಣದಲ್ಲಿರುವ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ‌ ಮೊದಲು ಎರೆಡು ಬಾರಿ ಕೂಡ್ಲಿಗಿಯಿಂದ ಬಿಜೆಪಿ‌ ಮತ್ತು ಪಕ್ಷೇತರ ಶಾಸಕರಾಗಿ. ಕಳೆದ ಬಾರಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.
ಈ ಬಾರಿ ಪ್ರಬಲ‌ ಪ್ರತಿಸ್ಪರ್ಧಿ ಸಚಿವ ಬಿ.ಶ್ರೀರಾಮುಲು ವಿರುದ್ದ ಸೇಣಸಬೇಕಾಗಿದೆ.
ಇನ್ನು ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುನ್ನಾಬಾಯ್ ನಾಮ‌ಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಕಚೇರಿಯಿಂದ ತಮ್ಮ ಬೆಂಬಲಿಗರ ಮೂಲಕ ಮೆರವಣಿಗೆ ಮೂಲಕ ಬಂದು ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.