ನಾಳೆ ನಮ್ಮೂರು ನೌವದಗೇರಿ ಜನಪದ ಜಾತ್ರೆ

ಬೀದರ :ಸೆ.16: ಈ ತಿಂಗಳ 17 ರಂದು ನಗರ ಹೊರ ವಲಯದ ಶುಕ್ಲ ತೀರ್ಥ ಮಡಿವಾಳೇಶ್ವರ ಶಿವ ಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕ, ಸಂಸ್ಕøತಿ ಮಂತ್ರಾಲಯ ನವ ದೆಹಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶುಕ್ಲ ತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ನಾವದಗೇರಿ ಹಾಗೂ ಕರುಣಾಮಯ ಯುವಕ ಸಂಘ ನಾವದಗೇರಿ ಇವರ ಸಹಯೋಗದಲ್ಲಿ ಜಾನಪದ ಸಾಂಸ್ಕøತಿಕ ಉತ್ಸವ ನಿಮಿತ್ತ ನಮ್ಮೂರು ನಾವದಗೇರಿ ಜನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ಲ ತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟನ ಅಧ್ಯಕ್ಷ ಓಂ ಪ್ರಕಾಶ ಬಜಾರೆ ತಿಳಿಸಿದರು.

ಶುಕ್ಲ ತೀರ್ಥ ಮಡಿವಾಳೇಶ್ವರ ಶಿವ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು , ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜೃಂಭಣೆಯಿಂದ ಈ ಉತ್ಸವ ಆಚರಿಸಲಾಗುತ್ತಿದೆ. ಕಳೆದರೆಡು ವರ್ಷಗಳಲ್ಲಿ ಕೋವಿಡ್‍ನಿಂದ ಅಷ್ಟು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಇದರ ಅಂಗವಾಗಿ ಸುಮಾರು 45 ದಿವಸಗಳವರೆಗೆ ರಾತ್ರಿ ಇಡಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡು ಅಂದು ಭಜನಾ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಸಹ ಜರುಗಲಿದೆ. ಈ ಸುಂದರ ಸಮಾರಂಭಕ್ಕೆ ಅವಧೂತÀಗಿರಿ ಮಹಾರಾಜರು, ಹವಮಲಿನಾಥ ಮಹಾರಾಜರು (ಮಲ್ಲಯ್ಯಾ ಮುತ್ಯಾ) ಎನ್.ಬಿ. ರೆಡ್ಡಿ ಗುರುಜಿ, ದತ್ತಗಿರಿ ಮಹಾರಾಜರು, ಚಾಂಬೋಳದ ಶ್ರೀಗಳು ಸೇರಿದಂತೆ ಅನೇಕ ಸಾಧು ಸಂತರು ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಲಿದ್ದಾರೆ ಎಂದರು.

ಅಂದು ಬೆಳಿಗ್ಗೆ 9.00 ಗಂಟೆಗೆ ನಾವದಗೇರಿ ಬಡಾವಣೆಯ ಹನುಮಾನ ಮಂದಿರದಿಂದ ಅಲ್ಲಿಯ ಸುಮಂಗಲೆಯರು ಕುಂಭ ಕಳಸ ಹೊತ್ತು ಮೆರವಣಿಗೆಯ ಶೋಭೆ ಹೆಚ್ಚಿಸಲಿದ್ದಾರೆ. ಮೇರವಣಿಗೆಯು ಬೌದ್ದ ಮಂದಿರ, ಸಿದ್ಧಾರ್ಥ ಕಾಲೇಜು, ನಾವದಗೇರಿ ಚರ್ಚ, ಬೇನಕನಳ್ಳಿ ರಸ್ತೆ, ಮಾರ್ಗದಿಂದ ಶುಕ್ಲ ತೀರ್ಥ ಮಡಿವಾಳೇಶ್ವರ ಶಿವ ಮಂದಿರದ ಸಭಾ ಮಂಟಪದ ವರೆಗೆ ಸಾಗಿ ಬರಲಿದೆ. ಮೇರವಣಿಗೆಯನ್ನು ಸಂಚಾರಿ ಪೊಲೀಸ್ ಇನ್ಸ್‍ಪೇಕ್ಟರ್ ವಿಜಯಕುಮಾರ ಬಿರಾದಾರ ಉದ್ಘಾಟಿಸುವರು, ಗಾಂಧಿ ಗಂಜ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ , ನಗರ ಸಭೆ ಸದಸ್ಯರಾದ ಎಮ್.ಡಿ.ಗೌಸೋದ್ದಿನ್ ಹಾಗೂ ಪ್ರಶಾಂತ ದೊಡ್ಡಿ ಭಾಗವಹಿಸುವರು. ಗೌರವ ಅತಿಥಿಗಳಾಗಿ ದಲಿತ ಮುಖಂಡ ಬಾಬುರಾವ ಪಾಸ್ವಾನ, ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ, ಸುನೀಲ ಬಚ್ಚನ್, ಸಂಜಯರಾಜ್ ಚಂದನ್,ಅಮರ ಭಂಗೆ,ಯುವ ಉದ್ಯಮಿ ಅಶೋಕ ಹೆಬ್ಬಾಳೆ ಉಪಸ್ಥಿತರಿರುವರು ಎಂದರು.

ಅಂದು ಮಧ್ಯಾಹ್ನ 2.00 ಗಂಟೆಗೆ ನಮ್ಮೂರು ನಾವದಗೇರಿ ಜನಪದ ಜಾತ್ರೆಯ ಉದ್ಘಾಟನಾ ಸಮಾರಂಭ ಜರುಗಲಿದೆ. ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪೂರೆ ಸಮಾರಂಭ ಉದ್ಘಾಟಿಸಲಿದ್ದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಡಾ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಹಿಂದು ಧರ್ಮದ ಚಿಂತಕ ಈಶ್ವರ ಸಿಂಗ್ ಠಾಕೂರ್, ಡೆನ್ ನೆಟವರ್ಕ ಮಾಲೀಕ ರವೀಂದ್ರ ಸ್ವಾಮಿ, ರಾಜ್ಯ ಅಭಿವೃದ್ಧಿ ಮತ್ತು ಸಮನ್ವಯ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಔರಾದ ತಾಲೂಕಾಧ್ಯಕ್ಷ ಸಂಜುಕುಮಾರ ಜುಮ್ಮಾ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಪುಂಡಲಿಕಪ್ಪ ಪಾಟೀಲ ಗುಮ್ಮಾ ಭಾಗವಹಿಸುವರು. ಕಜಾಪ ಬೀದರ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಕಾರ್ಯಕ್ರಮ ನಿರೂಪಿಸಲಿದ್ದು ಮಡಿವಾಳಯ್ಯ ಸ್ವಾಮಿ ವಂದಿಸುವರು.

ಅಂದು ಸಂಜೆ 7.00 ಗಂಟೆಗೆ ಜಾನಪದ ಸಾಂಸ್ಕøತಿಕ ಕಲಾ ಪ್ರದರ್ಶನ ಜರುಗಲಿದ್ದು ಕು.ದಾನೇಶ್ವರಿ ಎಮ್. ಮೇಲಿನಮಠರವರಿಂದ ಜಾನಪದ ಹಾಡುಗಳು , ಲಂಬಾಣಿ ಕಲಾವಿದೆ ಭಾರತಭಾಯಿ ಅವರಿಂದ ಲಂಬಾಣಿ ನೃತ್ಯ, ಪ್ರಭು ರೇವಣಯ್ಯ ಸ್ವಾಮಿ ಕಲಾತಂಡದಿಂದ ವೀರಭದ್ರ ಕುಣಿತ, ಕಲಬುರಗಿಯ ಜೇವರ್ಗಿ ತಾಲೂಕಿನ ಭೀಮರಾಯಿ ಭಜಂತ್ರಿ ಕಲಾ ತಂಡದಿಂದ ಕರಡಿ ಮಜಲು ಜಾನಪದ ವಾದನ , ಜಗದೇವಿ ಕಲಾ ತಂಡ ಚಿಕ್ಲಿ ವತಿಯಿಂದ ಹಲಗೆ ವಾದನ, ಕಂಬಳಮ್ಮ ಹಾಗೂ ಕಲಾತಂಡದಿಂದ ಪೈತ್ರಿ ಕುಣಿತ ,ಚೌದ್ರಿ ಬೆಳಕುಣಿಯ ಚಂದ್ರಕಾಂತಮುಗಟೆ ಹಾಗೂ ಕಲಾತಂಡದಿಂದ ಚಕ್ರೆ ಭಜನೆ, ಸಂಗೋಳಿ ರಾಯಣ್ಣ ಕಲಾ ತಂಡದ ಮಾಣಿಕ ಮಾಳಪ್ಪ ಚಿಂಚೋರೆ ಹಾಗೂ ತಂಡದಿಂದ ಡೊಳ್ಳು ಕುಣಿತ ಹಾಗೂ ಹೆಸರಾಂತ ರಾಜ್ಯ ಮಟ್ಟದ ಜಾನಪದ ಕಲಾವಿದರಾದ ಗದಗನ ರಾಜಶೇಖರಯ್ಯ ಹಿರೇಮಠ ಅವರಿಂದ ಜನಪದ ವೈವಿದ್ಯಮಯ ಕಾರ್ಯಕ್ರಮ ಜರುಗಲಿದೆ.

ಅಂದು ಮಧ್ಯಾಹ್ನ 1.00 ಗಂಟೆಯಿಂದ ತಡ ರಾತ್ರಿಯವರೆಗೆ ಮಹಾ ಪ್ರಸಾದ ಜರುಗಲಿದೆ. ರಾತ್ರಿಯಿಡಿ ಸಂಗೀತ ದರ್ಬಾರ ಜರುಗಲಿದ್ದು ಖ್ಯಾತ ಕಲಾವಿದರಾದ ರಾಮುಲು ಗಾದಗಿ, ಪುಂಡಲಿಕಪ್ಪ ಪಾಟೀಲ ಗುಮ್ಮಾ ಸೇರಿದಂತೆ ಅನೇಕ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಂಗೀತ ದರ್ಬಾರ ಕಾರ್ಯಕ್ರಮ ಜರುಗಲಿದೆ. ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲೆಯ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ಲ ತೀರ್ಥ ಸೇವಾ ಸಮಿತಿಯ ಅಧ್ಯಕ್ಷ ರಾಜಕುಮಾರ ಜಮಾದಾರ, ಮಾಜಿ ನಗರ ಸಭೆ ಸದಸ್ಯ ಫರ್ನಾಂಡಿಸ್ ಹಿಪ್ಪಳಗಾಂವ, ಸಂತೋಷ ಕಾಮಣ್ಣ, ಶಿವರಾಜ ಬೇನಕನಳ್ಳಿಕರ್, ಸಂಗಪ್ಪ ಬಿಕ್ಲೆ, ಮಡಿವಾಳಯ್ಯ ಸ್ವಾಮಿ, ಅನೀಲ ರಾಜಗೀರ,ಶಿವಕುಮಾರ ದಾನಾ, ರಾಜಕುಮಾರ ಡೊಂಗರಗಿ, ವೀರಶೆಟ್ಟಿ ಪಾಟೀಲ, ಜಗದೀಶ ಪಾಟೀಲ, ವೈಜಿನಾಥ ಭೋಸ್ಲೆ, ನಾಗೇಶ ಬಿರಾದಾರ, ಜ್ಞಾನೇಂದ್ರ ಬಜಾರೆ, ನಾಗೇಶ ಖ್ಯಾಮಾ, ಸಾಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.