ನಾಳೆ ನಡೆಯಲಿರುವ ಗ್ರಾ.ಪಂ.ಚುನಾವಣೆಗೆ ಸಕಲ ಸಿದ್ದತೆ

ಸಿರುಗುಪ್ಪ ಡಿ 21 : ಸಿರುಗುಪ್ಪ ತಾಲ್ಲೂಕಿನ 26 ಗ್ರಾಮ ಪಂಚಾಯಿತ್ ಕ್ಷೇತ್ರಗಳಿಗೆ ಡಿ.22ರಂದು ಮತದಾನ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ರಾಹುಲ್ ಸಂಕನೂರು ತಿಳಿಸಿದರು.
ನಗರದ ವಿವೇಕಾನಂದ ಆಂಗ್ಲಮಾಧ್ಯಮ ಪಬ್ಲೀಕ್ ವಸತಿ ಶಾಲೆಯ ಆವರಣದಲ್ಲಿ ಚುನಾವಣೆ ನಡೆಯುವ ಕೇಂದ್ರಗಳಿಗೆ ಮತದಾನದ ಪರಿಕಾರಗಳನ್ನು ವಿತರಿಸಿ ತಿಳಿಸಿದ ಅವರು ಮತದಾನ ಕೇಂದ್ರಕ್ಕೆ ಪಿ.ಆರ್.ಓ 200, ಎ.ಪಿ.ಆರ್.ಓ 200, ಪಿ.ಓ.400, ಡಿ.ಗ್ರೂಪ್ ಸಿಬ್ಬಂದಿ 200 ಸೇರಿ ಒಟ್ಟು 1000 ಸಿಬ್ಬಂದಿ, ಮತ ಗಟ್ಟೆಗೆ ಡಿಎಸ್‍ಪಿ 1, ಸಿ.ಪಿ.ಐ. 5, ಪಿ.ಎಸ್.ಐ. 5, ಹಾಗೂ ಎ.ಎಸ್.ಐ. 34 ಮತ್ತು ಹೆಚ್.ಸಿ 85, ಪಿ.ಸಿ 222, ಹೆಚ್.ಜಿ 19 ಸೇರಿ 371 ಸಿಬ್ಬಂದಿಗಳು ನೇಮಿಸಲಾಗಿದೆ, ಶಾಂತಿಯುತ ಮತದಾನ ನಡೆಯುವಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ.
ತಾಲೂಕಿನ 27 ಗ್ರಾಮ ಪಂಚಾಯಿತಿ 489 ರಲ್ಲಿ 93 ಅವಿರೋಧ ಆಯ್ಕೆ 365 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 72548 ಪುರುಷ, 73533 ಮಹಿಳಾ ಮತದಾರರು ಇದ್ದರು, ಒಟ್ಟು 146081 ಮತದಾರರು ಇದ್ದಾರೆ.
ಮತದಾನದ ಬಾಕ್ಸ್‍ಗಳನ್ನು ನಗರದ ವಿವೇಕಾನಂದ ಶಾಲೆಯಲ್ಲಿ ಶೇಖರಿಸಿ ಭದ್ರತಾ ಕೊಠಡಿಯಲ್ಲಿ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಲಾಗಿದ್ದು, ಡಿ.30ರಂದು ಮತ ಎಣಿಕೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮತ ಎಣಿಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.