ನಾಳೆ ನಗರಸಭೆ ಉಪಚುನಾವಣೆ-ಎಡಿಸಿ

ರಾಯಚೂರು, ಡಿ.೨೬- ಜಿಲ್ಲೆಯ ತೆರುವಾದ ೪ ಸ್ಥಾನಗಳ ಪೈಕಿ ೩ ಸ್ಥಾನಗಳಿಗೆ ನಾಳೆ ಉಪಚುನಾವಣೆ ನಡೆಯಲಿದ್ದು ಸಕಲ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ದುರುಗೇಶ ಕೆ. ಆರ್ ಅವರು ಸೂಚನೆ ನೀಡಿದರು.
ಅವರಿಂದು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸದ ನಗರಸಭೆ ಉಪಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಯಚೂರು ನಗರಸಭೆ, ಸಿಂಧನೂರು, ಮತ್ತು ದೇವದುರ್ಗ ಪುರಸಭೆಯಲ್ಲಿ ತೆರುವಾದ ಒಟ್ಟು ೩ ಸ್ಥಾನಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ.
ಲಿಂಗಸೂಗೂರು ಪುರಸಭೆ ತೆರವಾದ ಸ್ಥಾನಕ್ಕೆ ಅಭ್ಯರ್ಥಿಯನ್ನು ಅವಿವಿರೋಧ ಆಯ್ಕೆ ಮಾಡಲಾಗಿದೆ ಎಂದರು. ನಾಳೆ ನಡೆಯುವ ಉಪಚುನಾವಣೆ ಸಂಬಂಧಸಿದ ಅಧಿಕಾರಿಗಳು ಪಾರದರ್ಶಕ ನಡೆಸುವಂತೆ ಸೂಚನೆ ನೀಡಿದರು.
ನಗರಸಭೆ ವಾರ್ಡ್ ನಂ ೧೨ ರಲ್ಲಿ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಈ ವಾರ್ಡ್ ನಲ್ಲಿ ಒಟ್ಟು ೫೫೨೮ ಮತದಾರರು ಇದ್ದು, ೫ ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಪಿಆರ್ ಒ, ಹೆಚ್ ಆರ್ ಒ ಗಳನ್ನು ನೇಮಕ ಮಾಡಲಾಗಿದೆ ಎಂದರು. ನಗರಸಭೆ ಉಪಚುನಾವಣೆ ಫಲಿತಾಂಶ ದಿ.೨೯ ರಂದು ಪ್ರಕಟವಾಗಲಿದೆ ಎಂದು ತಿಳಿಸಿದರು.
ಮತದಾನ ಬಗ್ಗೆ ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.