
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.28: ನಾಳೆ ಮಧ್ಯಾಹ್ನ ಜಿಲ್ಲೆಯ ಸಿರುಗುಪ್ಪದಲ್ಲಿ ರೋಡ್ ಶೋ ಮುಗಿಸಿಕೊಂಡು ಸಂಜೆ 3.30 ಕ್ಕೆ ನಗರದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಗರದ ಕ್ಷೇತ್ರದ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರ ಪರವಾಗಿ ಮತಯಾಚನೆ ಮಾಡಲು ರೋಡ್ ಶೋ ನಡೆಸಲಿದ್ದಾರೆಂದು ಮಾಧ್ಯಮ ಸಹ ಸಂಚಾಲಕ ರಾಜೀವ್ ತೊಗರಿ ಹೇಳಿದ್ದಾರೆ.
ನಗರದ ಗಡಗಿ ಚೆನ್ನಪ್ಪ ಸರ್ಕಲ್ ನಿಂದ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ, ಜೈನ್ ಮಾರ್ಕೇಟ್, ಗವಿಯಪ್ಪ ಸರ್ಕಲ್ ಗೆ ರೋಡ್ ಶೋ ಮೂಲಕ ಬಂದು ಬಹಿರಂಗ ಸಭೆ ನಡೆಸಲಿದ್ದಾರೆ. ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ. ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ.