ನಾಳೆ ನಗರದಲ್ಲಿ ರೇಣುಕಾಚಾರ್ಯರ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,4- ವೀರಶೈವ ಲಿಂಗಾಯತ ಧರ್ಮ ಸಂಸ್ಥಾಪಕ‌ ರೇಣುಕಾಚಾರ್ಯರ ಜಯಂತಿಯನ್ನು ನಾಳೆ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ  ವೀರಶೈವ ಸಮಾಜದಿಂದ ಆಯೋಜಿಸಲಾಗಿದೆ.
ಈವರಗೆ ಸಮಾಜದಿಂದ ರೇಣುಕಾಚಾರ್ಯರ ಜಯಂತಿಯನ್ನು ಆಚರಣೆ ಮಾಡುತ್ತಿತ್ತು. ಇದೇ ಮೊದಲ ಬಾರಿಗೆ ಸರ್ಕಾರ ಇತರೇ ಮಹನೀಯರ ಜಯಂತಿಯಂತೆ ಸಮಾಜದೊಂದಿಗೆ ಸೇರಿ ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿದೆ.
ವೀರಶೈವ ಲಿಂಗಾಯತ ಸಮಾಜದಿಂದ ಪ್ರತಿ ವರ್ಷದಂತೆ ಬೆಳಿಗ್ಗೆ ನಗರದ ಮರಿಸ್ವಾಮಿ ಮಠದಲ್ಲಿ  ವಿಶೇಷ ಪೂಜೆ, ಅಭಿಷೇಕ, ಐದುನೂರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ.
ಸಂಜೆ 4 ವರೆಯಿಂದ  ನಗರದ ಕಮ್ಮ ಭವನದಿಂದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ವಿವಿಧ ಜನೊದ ಕಲಾ ತಂಡಗಳ ಮೆರವಣಿಗೆ ಕುಂಬ ಕಳಸಗಳೊಂದಿಗೆ ಆರಂಭಗೊಂಡು ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ ಮೂಲಕ ಮರಿಸ್ವಾಮಿ ಮಠಕ್ಕೆ ಬಂದು ತಲುಪಲಿದೆ.
ಆನಂತರ ವೇದಿಕೆ ಕಾರ್ಯಕ್ರಮ ಜರುಗಲಿದ್ದು. ಜನಪ್ರತಿನಿಧಿಗಳು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ಸಮಾಜದ ಮುಖಂಡ ಮಹಾಲಿಂಗಯ್ಯ(ರಾಜಣ್ಣ) ತಿಳಿಸಿದ್ದಾರೆ.