ನಾಳೆ ನಗರದಲ್ಲಿ ರಕ್ತರಾತ್ರಿ ನಾಟಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,22- ನಾಳೆ ಜು 23 ರಂದು ಸಂಜೆ 6.30 ಕ್ಕೆ ನಗರದ ರಾಘವ ಕಲಾ ಮಂದಿರದಲ್ಲಿ ರಕ್ತ ರಾತ್ರಿ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ಡಾ.ಪುಟ್ಟರಾಜ ಕವಿ ಗವಾಯಿಗಳ 12 ನೇ ಪುಣ್ಯ ಸ್ಮರಣೆಯ ಅಂಗವಾಗಿ ಈ ನಾಟಕ ಪ್ರದರ್ಶನವನ್ನು ನಗರದ ಶಿವಸಾಯಿ ಕಲ್ಚರಲ್ ಟ್ರಸ್ಟ್ ಆಯೋಜಿಸಿದೆ.
ಕೊಂಚಿಗೇರಿಯ ಕವಿ ಡಿ.ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಂಗಕಲಾವಿದ ಜಿ.ಚನ್ನಬಸಪ್ಪ ಅಧ್ಯಕ್ಷತೆವಹಿಸಲಿದ್ದಾರೆ. ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಟಕ ಪ್ರದರ್ಶನ ಮುನ್ನ ಸಂಜೆ 5.30 ಕ್ಕೆ ಕಲ್ಯಾಣಿ ಮನ್ಸೂರು ಅವರಿಂದ ರಂಗಗೀತೆಗಳ ಗಾಯನ ನಡೆಯಲಿದೆ, ಸೂಲದಳ್ಳಿಯ ತಿಪ್ಪೇಸ್ವಾಮಿ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ಶಿವಸಾಯಿ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷೆ ಎ.ವರಲಕ್ಷ್ಮಿ ತಿಳಿಸಿದ್ದಾರೆ.

Attachments area