ನಾಳೆ ನಗರದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ರಂಗೇರಿದ ಚುನಾವಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.28: ಜಿಲ್ಲಾ ಕುರುಬರ ಸಂಘದ 31 ನಿರ್ದೇಶಕರ ಸ್ಥಾನಕ್ಕೆ ನಾಳೆ ಅ.29ರಂದು ಚುನಾವಣೆ ನಡೆಯುತ್ತಿದ್ದು ಚುನಾವಣಾ ಕಣ ರಂಗೇರಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಮತ್ತು ನಗರ ಪ್ರದೇಶದಿಂದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ
ಗ್ರಾಮೀಣ ಕ್ಷೇತ್ರದಿಂದ 25 ಸ್ಥಾನಗಳ ಪೈಕಿ 5 ಮಹಿಳಾ ಸ್ಥಾನಗಳು ಮೀಸಲಿದ್ದವು. ಇವುಗಳಿಗೆ ಪ್ರತಿ ತಾಲೂಕಿಗೆ ಒಬ್ಬರಂತೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಉಳಿದ 20 ಸಾಮಾನ್ಯ ಸ್ಥಾನಗಳಿಗೆ 27ಜನ ಸ್ಪರ್ಧಾ ಕಣದಲ್ಲಿದ್ದಾರೆ.
ಈ 27 ಜನರಲ್ಲಿ 20 ಜನರ ಗುಂಪೊಂದು ರಚನೆಯಾಗಿ ಬಲಾ ಬಲಾ ಪ್ರದರ್ಶನಕ್ಕೆ ಸಜ್ಜಾಗಿದೆ. ಗ್ರಾಮೀಣದಲ್ಲಿ ಎಲ್ಲಾ ತಾಲೂಕಿನಿಂದ ಅಭ್ಯರ್ಥಿಗಳ ಆಯ್ಕೆ ಮಾಡಿಕೊಂಡು ರಚನೆಗೊಂಡು ಮತದಾರರ ಮನವೊಲಿಸಿ ತಮಗೆ ಮತ ನೀಡುವಂತೆ ಮನವಿ ಮಾಡುವ ಪ್ರಕ್ರಿಯೆ ನಡೆದಿದೆ.
@12bc = ನಗರ
ಇನ್ನು ನಗರ ಪ್ರದೇಶದಲ್ಲಿ ಓರ್ವ ಮಹಿಳೆ ಸೇರಿದಂತೆ 6 ಜನ ನಿರ್ದೇಶಕರ ಆಯ್ಕೆ ಮಾಡಬೇಕಿದೆ. ಒಂದು ಮಹಿಳಾ ಸ್ಥಾನಕ್ಕೆ ನಾಲ್ಕು ಜನ ಸ್ಪರ್ಧಾಕಾಂಕ್ಷಿಗಳಿದ್ದಾರೆ. ಇನ್ನುಳಿದಂತೆ 5 ಸ್ಥಾನಗಳಿಗೆ-13 ಜನ ಪುರುಷರ ಸ್ಪರ್ಧೆಯಲ್ಲಿದ್ದು ಇಲ್ಲಿ ಮೂರು ಗುಂಪುಗಳಾಗಿವೆ. ಒಂದು ಗುಂಪು ಅಲ್ಲಿಪುರ ಕೆ.ಮೋಹನ್ ನೇತೃತ್ವದಲ್ಲಿ ತೀವ್ರ ಸ್ಪರ್ಧೆಯನ್ನೊಡ್ಡಿದೆ
ಮತದಾನ ಮತದಾನಕ್ಕಾಗಿ ನಗರದ ಹೊಸ್ ಬಸ್ ನಿಲ್ದಾಣದ ಎದುರಿನ ವೀ.ವಿಸಂಘದ ಹೀರದ ಸೂಗಮ್ಮ ಶಾಲೆಯಲ್ಲಿ ವ್ಯವಸ್ಥೆ ಮಾಡಿದೆ. ಗ್ರಾಮೀಣ ನಿರ್ದೇಶಕರ ಆಯ್ಕೆಗೆ 6 ಮತಗಟ್ಟೆ ವ್ಯವಸ್ಥೆ ಮಾಡಿದ್ದು 2628 ಮತದಾರರಿದ್ದಾರೆ.
ಬಳ್ಳಾರಿ ನಗರ ನಿರ್ದೇಶಕರ ಆಯ್ಕೆಗೆ 5 ಮತಗಟ್ಟೆ ರಚಿಸಿದ್ದು 2424 ಮತದಾರರಿದ್ದಾರೆಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ನಂತರ ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 70 ಜನ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಚುನಾವಣಾಧಿಕಾರಿ ಜೆ.ಎಂ.ನಾಗರಾಜ ಸಂಜೆವಾಣಿಗೆ ತಿಳಿಸಿದ್ದಾರೆ.
ಮತದಾನ ಆರಂಭಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ಹೀರದ ಸೂಗಮ್ಮ ಶಾಲೆಯಲ್ಲಿಯೇ ಸಂಘದ ಸರ್ವಸದಸ್ಯರ ಸಾಮಾನ್ಯಸಭೆ ನಡೆಸುತ್ತಿರುವುದಾಗಿ ಸಂಘದ ಆಡಳಿತಾಧಿಕಾರಿ ಜಿ.ಎಂ.ವೀರಭದ್ರಯ್ಯ ತಿಳಿಸಿದ್ದಾರೆ.
ಮತಗಟ್ಟೆ ಮುಂಭಾಗದಲ್ಲಿ ಸ್ಪರ್ಧಾಕಾಂಕ್ಷಿಗಳ ಬ್ಯಾನರ್ ಭರಾಟೆ ಹೆಚ್ಚಿದೆ.
ಬಾಕ್ಸ್
ಅವಿರೋಧವಾಗಿ ಆಯ್ಕೆಯಾದವರು
ಕಂಪ್ಲಿ ದೇವಲಾಪಯರದ ಶಾಂತಮ್ಮ, ಮದಿರೆ ಗ್ರಾಮದ ಪುಷ್ಪಾವತಿ, ಸಿರುಗುಪ್ಪದ
ಸಂಡೂರು ತಾಲೂಕಿನ ಎಸ್ ಬಸಾಪುರದ ಗಿರಿಯಮ್ಮ,
ಮಂಡಗಿರಿ ರಾಜೇಶ್ವರಿ,
ಬಳ್ಳಾರಿ ತಾಲೂಕಿನ ಕಕ್ಕ ಬೇವಿನಹಳ್ಳಿಯ ಕೆ.ಲತಾ