ನಾಳೆ ನಗರದಲ್ಲಿ ನಾರಾಯಣ ಗುರುಗಳ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.09: ನಾಳೆ ನಗರದಲ್ಲಿ  ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತಿಯನ್ನು ಜಿಲ್ಲಾಡಳಿತ ಬಿಡಿಎಎ ಸಭಾಂಗಣದಲ್ಲಿ ಬೆಳಗ್ಗೆ ಹಮ್ಮಿಕೊಂಡಿದೆ.
ಇದಕ್ಕೂ ಮುನ್ನ ನಗರದ ಈಡಿಗ ಹಾಸ್ಟೇಲ್ ನಿಂದ ಆರಂಭಗೊಳ್ಳುವ ಗುರುಗಳ ಭಾವಚಿತ್ರದ ಮೆರವಣಿಗೆ ಬಿಡಿಎ ಸಭಾಂಗಣಕ್ಕೆ ಬಂದು ತಲುಪಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಚಿವರು ಶಾಸಕರು ಇತರೇ ಗಣ್ಯರು ಪಾಲ್ಗೊಳ್ಳಲಿದ್ದಾರೆ.