
(ಸಂಜೆವಾಣಿ ವಾರ್ತೆ)ಬಳ್ಳಾರಿ:ಜು,22- ನಗರದ ಅಗ್ನಿ ಶಾಮಕ ಠಾಣೆ ಬಳಿ ಇರುವ ಕುಮಾರಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಮಹೋತ್ಸವದ ಅಂಗವಾಗಿ ನಾಳೆ ಜು 23 ರಂದು ಬೆಳಿಗ್ಗೆ 5 ರಿಂದ 6.30 ರ ವರಗೆ ವಿಶೇಷ ಅಭಿಷೇಕ ಪೂಜೆ, ನಂತರ ಸುಬ್ರಮಣ್ಯಂ ಸ್ವಾಮಿಯ ಉತ್ಸವ ಮೂರ್ತಿಯನ್ಬು ಅಲಂಕರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಿದೆ. ಆಡಿ ಕೃತಿಕ ಅಂಗವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಅನ್ನಸಂತರ್ಪಣೆಯನ್ನು ಸಹ ಹಮ್ಮಿಕೊಂಡಿರುವುದಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಂಮತಪ್ಪ ತಿಳಿಸಿದ್ದಾರೆ. Attachments area |