ನಾಳೆ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಪೂರ್ವಭಾವಿ ಸಭೆ

ವಿಜಯಪುರ :ಜೂ.19: ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ದಿನಾಂಕ : 20-06-2023 ರಂದು ಮಂಗಳವಾರ ಬೆಳಿಗ್ಗೆ 11 ಘಂಟೆಗೆ ವಿಜಯಪುರ ನಗರದ ಕೃಷಿ ತಂತ್ರಜ್ಞಾನ ಸಂಸ್ಥೆ, ಕನಕದಾಸ ಬಡಾವಣೆ ಜಿಲ್ಲಾ ಪಂಚಾಯಿತಿ ಹತ್ತಿರ ಒಣ ದ್ರಾಕ್ಷಿ ಸಮಸ್ಯೆ ಕುರಿತು ಚರ್ಚಿಸಲು ಪೂರ್ವ ಭಾವಿ ಹಮ್ಮಿಕೊಳ್ಳಲಾಗಿದೆ.
ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದು, ಒಣದ್ರಾಕ್ಷಿ ಮಾರುಕಟ್ಟೆ ದರ ಇಳಿಕೆಯಾಗಿದ್ದರ ಹಿನ್ನೆಲೆ ದ್ರಾಕ್ಷಿ ಬೆಳೆಗಾರರ ಪೂರ್ವ ಭಾವಿ ಸಭೆ ಹಮ್ಮಿಕೊಳ್ಳಲಾಗಿದೆ, ಕಾರಣ ಎಲ್ಲಾ ರೈತ ಮಿತ್ರರು ಈ ಸಭೆಯಲ್ಲಿ ಪಾಲ್ಗೊಂಡು ದ್ರಾಕ್ಷಿ ಬೆಳೆಯ ಹಾಗೂ ಇನ್ನೀತರ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದೆಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ಕೆ.ಎಚ್. ಮುಂಬಾರಡ್ಡಿ ಅವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.