ನಾಳೆ ದುರ್ಗಮ್ಮ ಸಿಡಿಬಂಡಿ ರಥೋತ್ಸವ

ಬಳ್ಳಾರಿ ಮಾ 22 : ನಾಳೆ ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಿಯ ವಾರ್ಷಿಕ ಸಿಡಿ ಬಂಡಿ ರಥೋತ್ವ ನಡೆಯಲಿದೆ. ಕೋವಿಡ್‍ನಿಂದಾಗಿ ಸಾರ್ವಜನಿಕರು ರಥೋತ್ವದಲ್ಲಿ ಭಾಘವಹಿಸುವುದನ್ನು ನಿರ್ಭಂದಿಸಲಾಗಿದೆ.
ಪ್ರತಿ ವರ್ಷ ಸಂಜೆ ವೇಳೆ ನಡೆಯುತ್ತಿದ್ದ ಸಿಡಿಬಂಡಿಯನ್ನು ನಾಳೆ ಬೆಳಿಗ್ಗೆಯೇ ಪ್ರತಿವರ್ಷದ ಧಾರ್ಮಿಕ ವಿಧಿ ವಿಧಾನಗಳಾದ ಮೇಟಿ ಕುಂಬ ತರುವುದು, ಅಭಿಷೇಕ, ಚಿನ್ನದ ಮುಖ ಕವಚ ಧಾರಣೆ ಮೊದಲಾದವುಗಳನ್ನು ಕೈಗೊಂಡು ಸಿಡಿಬಂಡಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಇನ್ನೂ ಸ್ಪಷ್ಟನೆ ನೀಡಿಲ್ಲ.
ನಾಳೆಯಿಂದ ಎಪ್ರಿಲ್ 3 ವರೆಗೆ ದೇವಸ್ಥಾನದಲ್ಲಿ ಕಾಯಿ ಹೊಡೆಯುವುದು, ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮೊದಲಾದವನ್ನು ನಿಷೇಧಿಸಲಾಗಿದ್ದು ಮಾಸ್ಕ ಧರಿಸಿ ಬರುವ ಭಕ್ತಾಧಿಗಳಿಗೆ ಮಾತ್ರ ದರ್ಶನ ಕಲ್ಪಿಸಲಿದೆ.