ನಾಳೆ ದಾವಣಗೆರೆಗೆ ಸಿದ್ದರಾಮಯ್ಯ ಭೇಟಿ; ಇಡಿ ವಿರುದ್ದ ಬೃಹತ್ ಪ್ರತಿಭಟನೆ


ದಾವಣಗೆರೆ. ಜು.೨೧; ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅವರ ಆಶಯದಂತೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವ ವಿಶ್ವಾಸ ಹೊಂದಿದ್ದೆವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದಾವಣಗೆರೆ ಉಸ್ತುವಾರಿ ವಹಿಸಿರುವ ಎಂ.ಸಿ ವೇಣುಗೋಪಾಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ರಾಷ್ಟ್ರ, ಜಿಲ್ಲೆ,ತಾಲ್ಲೂಕು ವ್ಯಾಪ್ತಿಯಲ್ಲಿ ಚಿಂತನಾ ಶಿಬಿರ ಹಮ್ಮಿಕೊಳ್ಳಲಾಗಿದೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚಿಂತನಾ ಸಭೆ ಹಮ್ಮಿಕೊಳ್ಳಲಾಗುವುದು ಆಡಳಿತ ಪಕ್ಷದ ವೈಫಲ್ಯ ಗಳನ್ನು ತಿಳಿಸಲು ಹಾಗೂ ಪಕ್ಷ ಸಂಘಟನೆ ಬಗ್ಗೆ ಆದ್ಯತೆ ನೀಡಲಾಗಿದೆ. ಚುನಾವಣೆಯ ಬಗ್ಗೆ ಪಕ್ಷ ಸಾಮಾಜಿಕ ಕಳಕಳಿ ಹೊಂದಿದೆ. ರಾಜ್ಯದ ಕೇಂದ್ರ ಸ್ಥಾನ‌ ದಾವಣಗೆರೆಯಾಗಿದೆ.ಈಗಾಗಲೇ ಜಗಳೂರು, ಮಾಯಕೊಂಡ,ಹೊನ್ನಾಳಿ, ಚನ್ನಗಿರಿ ಹಾಗೂ ಹರಿಹರದಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷ ಮನ್ನಣೆ ನೀಡಲಿದೆ. ಮುಂದಿನ ಚುನಾವಣೆಗೆ ಕಾರ್ಯಕರ್ತರ ಭಾವನೆಗೆ ಹೆಚ್ಚಿನ ಅವಕಾಶ ನೀಡಿದೆ. ಕಾರ್ಯಕರ್ತರಿಗೆ ಮನ್ನಣೆ ನೀಡಿದಾಗ ಯಾವ ಅಭ್ಯರ್ಥಿ ನೀಡಿದರೂ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಆ ಜವಾಬ್ದಾರಿ ನಮ್ಮದು ಎಂದಿದ್ದಾರೆ ಹಾಗೂ ಆರು ತಿಂಗಳ‌ಮೊದಲೇ ಅಭ್ಯರ್ಥಿ ನೀಡಬೇಕು ಎಂಬ ಬಗ್ಗೆ ತಿಳಿಸಿದ್ದಾರೆ.ಬಿಜೆಪಿ ಭ್ರಷ್ಟಾಚಾರ, ಬೆಲೆ‌ಏರಿಕೆ, ಕೋಮುಗಲಭೆಗೆ ಜನ ಬೇಸತ್ತಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವು ಇದೆ.ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಅವಕಾಶ ಇದೆ ನಾಯಕರು ಒಗ್ಗೂಡಿದರೆ ೧೫೦ ಸ್ಥಾನ ಗೆಲ್ಲಲು ಸಾಧ್ಯ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರುಜು.೨೭ ರಂದು ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯಭವನದಲ್ಲಿ ಬೆಳಗ್ಗೆ ೧೧ ಕ್ಕೆ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ.ದಾವಣಗೆರೆಯಲ್ಲಿ ಚಿಂತನಾ ಸಭೆ ನಡೆಯಲಿದೆ ಏಳು ಕ್ಷೇತ್ರದ ಅಭಿಪ್ರಾಯ ಅಂದು ತಿಳಿದು ಬರಲಿದೆ.ಚುನಾವಣೆಗೆ ಇದು ಸಹಕಾರಿಯಾಗಲಿದೆ ಪಕ್ಷ ಸಂಘಟನೆಗೂ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾಗಿದೆ.ಈ  ಅಮೃತಮಹೋತ್ಸವ ದಿನಾಚರಣೆ ಬಗ್ಗೆಯೂ ರಾಜ್ಯ ಹಾಗೂ ಜಿಲ್ಲಾ ಪ್ರವಾಸದಲ್ಲಿ ಚರ್ಚೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿವರ್ಣ ಧ್ವಜದೊಂದಿಗೆ ಪಾದಯಾತ್ರೆ ಮಾಡಲಾಗುವುದು. ಯುವಕರನ್ನು ಸಂಘಟಿಸಲಾಗಿವುದು ಸ್ವಾತಂತ್ರ್ಯಕ್ಕೆ ತ್ಯಾಗ ಮಾಡಿದವರ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಮಸಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆಆ.೩ ರಂದು ೭೫ ವರ್ಷವಾಗುತ್ತಿರುವ  ಹಿನ್ನೆಲೆಯಲ್ಲಿ ಕೇಂದ್ರ ಸ್ಥಾನವಾದ ದಾವಣಗೆರೆ ಯಲ್ಲಿ ಆಚರಣೆ ಮಾಡಲಾಗುತ್ತಿದೆ ಆ ದಿನವನ್ನು ಸಾಮಾಜಿಕ‌ ದಿನಾಚರಣೆ ನ್ಯಾಯದ ದಿನವಾಗಿ ಆಚರಣೆ ಮಾಡಲಾಗುತ್ತದೆ. ಅವರು ಸಿಎಂ ಆಗಿದ್ದ ವೇಳೆ ನೀಡಿದ ಜನಪರ ಕಾಳಜಿ ಅನಾವರಣ ಮಾಡಲಾಗುತ್ತದೆ ಎಂದರು.ಪ್ರಜಾಪ್ರಭುತ್ವ ನೀಡಿದದ್ದು ಕಾಂಗ್ರೆಸ್ ಪಕ್ಷ. ಇಂದು ಜಿಎಸ್ ಟಿಗೆ ಕುಡಿಯುವ ಹಾಲು ಮೊಸರಿಗೆ ಹಾಕಲಾಗಿದೆ ಇಂತಹ ಸರ್ಕಾರದ ಅವಶ್ಯಕತೆ ಇಲ್ಲ.
ಇಡಿ ರೇಡ್ ಮಾಡುವುದು ರಾಜಕೀಯ ದುರುದ್ದೇಶವಾಗಿದೆ ಜನರಿಗೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಬದಲು ಇಂತಹ ಆಡಳಿತ ಮಾಡಲಾಗುತ್ತಿದೆ.ಸರ್ಕಾರಿ ಸಂಸ್ಥೆಗಳನ್ನು ಖಾಸಗೀರಣ ಮಾಡಲು ಹೊರಟಿರುವುದು ದುರಂತ.ದೇಶಕ್ಕೆ ಸೈನಿಕರನ್ನು ಆಯ್ಕೆ ಮಾಡಲು ಅಗ್ನಿಪಥ ಯೋಜನೆ ರೂಪಿಸಿರುವುದು ದುರಂತ. ಸೈನಿಕರಿಗೆ ಗೌರವ ಘನತೆಗೆ ಬೆಲೆ ಇಲ್ಲದಂತೆ ಮಾಡಿರುವುದು ಖಂಡನೀಯ ಎಂದರು.ಸುದ್ದಿಗೋಷ್ಠಿಯಲ್ಲಿ ನಿಖೇತ್ ರಾಜ್ ಮೌರ್ಯ ,ಗಡಿಗುಡಾಳ್ ಮಂಜುನಾಥ್, ಆಯಿಉಬ್ ಪೈಲ್ವಾನ್,ಕೆಜಿ ಶಿವಕುಮಾರ್, ಬಸವಂತಪ್ಪ,ಎಸ್ ಮಲ್ಲಿಕಾರ್ಜುನ ಎ ನಾಗರಾಜ್ ಹರೀಶ್ ಬಸಾಪುರ ಮತ್ತಿತರರಿದ್ದರು.