ನಾಳೆ ದತ್ತಿ ಉಪನ್ಯಾಸ, ಸಮಾರಂಭ


ಧಾರವಾಡ,ಎ.3: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.4 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ, `ಖ್ಯಾತ ಹೋಮಿಯೋಪಥಿ ವೈದ್ಯ ಡಾ. ಎಚ್.ಎಚ್. ಸಿನ್ನೂರ’ ಅವರ ಹೆಸರಿನ ದತ್ತಿ ಉದ್ಘಾಟನೆ, ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಉದ್ಘಾಟಕರಾಗಿ ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಪ್ರೊ. ಎ.ಜಿ. ಸಬರದ ಅವರು ಆಗಮಿಸುವರು.
ಅತಿಥಿ ಉಪನ್ಯಾಸಕರಾಗಿ ಧಾರವಾಡ ದ.ಭಾ.ಹಿ.ಪ್ರ. ಸಭೆಯ ಬಿ.ಡಿ. ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾಗಿ ಆಗಮಿಸಿ, ಡಾ. ಮಂಜುಳಾ ಹಳೆಹೊಳಿ(ನಂದಿ) ಅವರು ‘ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರಕ್ಕೆ ಡಾ. ಎಚ್.ಎಚ್. ಸಿನ್ನೂರರ ಕೊಡುಗೆ’ ವಿಷಯ ಕುರಿತು ಉಪನ್ಯಾಸ ನೀಡುವರು.
2020 ನೇ ವರ್ಷದ ಸನ್ಮಾನಕ್ಕೆ ಭಾಜನರಾದ ಧಾರವಾಡ ದ.ಭಾ.ಹಿ.ಪ್ರ. ಸಭೆಯ ಬಿ.ಡಿ. ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆನಂದ ಕುಲಕರ್ಣಿ ಹಾಗೂ 2021ನೇ ವರ್ಷದ ಸನ್ಮಾನಕ್ಕೆ ಭಾಜನರಾದ ಧಾರವಾಡದ ಸಮಾಜ ಸೇವಕಿ ಶ್ರೀಮತಿ ಮಾಧುರಿ ಚಿಕ್ಕೋಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಧಾರವಾಡ ಕ.ವಿ.ವ. ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ) ಅವರು ಅಧ್ಯಕ್ಷತೆ ವಹಿಸುವರು.
ದತ್ತಿ ದಾನಿಗಳಾದ ಡಾ. ಪಾರ್ವತಿ ಹಾಲಭಾವಿ ಮತ್ತು ಶ್ರೀ ಸುರೇಶ ಹಾಲಭಾವಿ ಅವರು ಗೌರವ ಉಪಸ್ಥಿತರಿರುವರು.
ಲೇಖಕರು, ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮತ್ತು ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಹಾಗೂ ಮಾಸ್ಕ್ ಧರಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಎಸ್. ಉಡಿಕೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಏಪ್ರಿಲ್ ತಿಂಗಳ ದತ್ತಿ ಕಾರ್ಯಕ್ರಮದ ಸಂಯೋಜಕರಾದ ಚೈತ್ರಾ ಮೋಹನ ನಾಗಮ್ಮನವರ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.