ನಾಳೆ ತ್ರಿಭುಜ ಪ್ರಪಂಚ ಕೃತಿ ಲೋಕಾರ್ಪಣೆ

ಧಾರವಾಡ, ನ9: ಡಾ ಎಚ್. ಎಫ್. ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ- ಧಾರವಾಡ (ಅಪರ ಆಯುಕ್ತರ ಕಚೇರಿ, ಸಾ.ಶಿ.ಇ) ಜನತಾ ಶಿಕ್ಷಣ ಸಮಿತಿ-ವಿದ್ಯಾಗಿರಿ, ಧಾರವಾಡ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ವತಿಯಿಂದ ಕೆ ಜಿ ದೇವರಮನಿ ಇವರ ಪಠ್ಯ ಪೂರಕವಾದ ” ತ್ರಿಭುಜ ಪ್ರಪಂಚ”ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 11-30 ಕ್ಕೆ ಡಿ.ಆರ್.ಎಸ್. ಸಭಾಭವನ ಜೆ.ಎಸ್.ಎಸ್.ಕಾಲೇಜನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಕಟ್ಟಿಮನಿ ಪ್ರತಿಷ್ಠಾನ ಸಹಾಯಕ ನಿರ್ದೇಶಕರಾದ ಶಂಕರ ಗಂಗಣ್ಣವರ ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ ಅಜಿತ ಪ್ರಸಾದ ಕೃತಿ ಲೋಕಾರ್ಪಣೆ ಮಾಡುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್.ಎ.ಭಾವಿಕಟ್ಟಿ ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ ಕಟ್ಟಿಮನಿ ಪ್ರತಿಷ್ಠಾನ ಗೌರವ ನಿರ್ದೇಶಕರಾದ ಎಸ್ ಬಿ ಕೊಡ್ಲಿ, ಡಯಟ್ ಪ್ರಾಚಾರ್ಯರಾದ ಎನ್.ಕೆ.ಸಾಹುಕಾರ ಆಗಮಿಸುವರು. ತ್ರಿಭುಜ ಪ್ರಪಂಚ ಕೃತಿಯ ಲೇಖಕರಾದ ಕೆ ಜೆ ದೇವರಮನಿ ಉಪಸ್ಥಿತರಿರುವರು ಎಂದರು.
ಆಯೋಜಕರು, ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ, ಕಬ್ಬಿಣದ ಕಡಲೆಯಂತೆ ಗಣಿತ ಅನ್ನುವ ಭಾವನೆಯಿರುವ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಕೈಪಿಡಿಯಂತೆ ಇರುವ ಈ ತ್ರಿಭುಜ ಪ್ರಪಂಚ ಬಹಳ ಉಪಯುಕ್ತವಾದದದು. ಮಕ್ಕಳ ಕಲಿಕೆಗೆ ಪೂರಕವಾದ ಸರಳವಾದ ಭಾಷೆಯಲ್ಲಿ ತ್ರಿಭುಜವನ್ನು ಪರಿಚಯಿಸುವ ಕಾರ್ಯವನ್ನು ಕೆ.ಡಿ.ದೇವರಮನಿ ಅವರು ಮಾಡಿದ್ದಾರೆ. ಸಾಮಾನ್ಯವಾಗಿ ಕಲಿಕೆಯೆಂಬುದು ಭೂತಕಾಲದಿಂದ ? ವರ್ತಮಾನ – ಭವಿಷ್ಯತ್ ಕಾಲದತ್ತ ಪಯಣಿಸುವಂತಿರಬೇಕಿರುವುದು ತುಂಬಾ ಅಗತ್ಯವಾಗಿದೆ. ಗಣಿತ ವಿಷಯದಲ್ಲಂತೂ ಪೂರ್ವ ಜ್ಞಾನವಿಲ್ಲದಿದ್ದರೆ ಆ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣವಾದೆ. ಆದ್ದರಿಂದ ಕಲಿಕಾಂಶಗಳು ಪೂರ್ವ ಜ್ಞಾನವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರಬೇಕು. ಅಂದರೆ ಕಲಿಕಾಂಶಗಳು ಗೊತ್ತಿದ್ದರಿಂದ ಗೊತ್ತಿಲ್ಲದರೆಡೆಗೆ ಸಾಗುವಂತಿರಬೇಕು. ಹೀಗೆ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಲೇಖಕರಾದ ಕೆ. ಜಿ. ದೇವರಮನಿ, ಇವರು ‘ತ್ರಿಭುಜ ಪ್ರಪಂಚ’ ಕೃತಿಯಲ್ಲಿ 6-10 ನೇ ವರ್ಗದ ಮಕ್ಕಳಿಗಾಗಿ ತ್ರಿಭುಜಕ್ಕೆ ಮತ್ತು ಗಣಿತದ ವಿಷಯಕ್ಕೆ ಪೂರಕ ಸಾಹಿತ್ಯವನ್ನು ನೀಡಿ ತ್ರಿಭುಜಗಳ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ ಎಂದರು.
ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇದು ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ತಲುಪಲಿ ಎಂದು ಆಶಿಸುವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಅಧ್ಯಕ್ಷರಾದ ಕೆ.ಎಚ್.ನಾಯಕ, ಲೇಖಕರಾದ ಕೆ.ಡಿ.ದೇವರಮನಿ, ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ, ನಿವೃತ್ತ ಶಿಕ್ಷಕರಾದ ಬಿ.ಜಿ ಬಾರ್ಕಿ ಉಪಸ್ಥಿತರಿದ್ದರು.